
ಲಕ್ಷ್ಮಿ ಹೆಬ್ಬಾಳಕರ್ ಹಾಗು ಎನ್. ರವಿಕುಮಾರ
ಚನ್ನಮ್ಮನ ಕಿತ್ತೂರು: ‘ಕರ್ನಾಟಕವು ಮಾದಕ ವಸ್ತುಗಳು, ದರೋಡೆ ಮತ್ತು ಭ್ರಷ್ಟಾಚಾರ ರಾಜ್ಯವಾಗಿದೆ. ಮೇಲಿರುವ ಪರಮೇಶ್ವರನೇ ರಾಜ್ಯವನ್ನು ಕಾಪಾಡಬೇಕಿದೆ’ ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ ವ್ಯಂಗ್ಯವಾಡಿದರು.
ಇಲ್ಲಿಯ ಬಿಜೆಪಿ ಮಂಡಳ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಸ್ತೆ ‘ಕರ್ನಾಟಕವು ಗುಂಡಿಗಳ ರಾಜ್ಯ’ವಾಗಿದೆ. ಶೇ 63 ಲಂಚ ವ್ಯವಹಾರ ನಡೆಯುತ್ತಿದೆಯೆಂದು ವರದಿಯೊಂದು ಹೇಳುತ್ತದೆ’ ಎಂದು ವಾಗ್ದಾಳಿ ನಡೆಸಿದರು.
‘ರಾಜ್ಯದ ಬಹುತೇಕ ಜಲಾಶಯಗಳು ಎರಡೆರಡು ಬಾರಿ ತುಂಬಿದವು. ಆದರೆ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕಾಲುವೆ ಮುಖಾಂತರ ನೀರು ಹರಿಸುತ್ತಿಲ್ಲ. ಎರಡನೇ ಬೆಳೆ ಬೆಳೆಯಲು ಅವರಿಗೆ ಅವಕಾಶ ನೀಡುತ್ತಿಲ್ಲ’ ಎಂದು ಟೀಕಿಸಿದರು.
‘ಉತ್ತರ ಕರ್ನಾಟಕದ ರೈತರು, ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಬೆಳಗಾವಿ ಅಧಿವೇಶನದ ಒಳಗೆ ಮತ್ತು ಹೊರಗೆ ಮೊದಲು ದಿನದಿಂದಲೇ ದೊಡ್ಡಮಟ್ಟದ ಹೋರಾಟ ಮಾಡಲಾಗುವುದು’ ಎಂದು ಘೋಷಿಸಿದರು.
ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಪಕ್ಷದ ಕಾರ್ಯದರ್ಶಿ ಶರಣು ತಳ್ಳಿಕೇರಿ, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸುಭಾಸ ಪಾಟಿಲ, ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.