
ಹುಕ್ಕೇರಿ: ತಾಲ್ಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಕಟ್ಟಡ ನಿರ್ಮಿಸಬೇಕು ಎಂದು ಪಾಶ್ಚಾಪುರ ಗ್ರಾಮ ಪಂಚಾಯತಿ ಸದಸ್ಯ ಜಾಕೀರ ದಸ್ತಗೀರಸಾಬ ನದಾಫ ಅವರು ಈಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
‘ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಪಾಶ್ಚಾಪುರ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಟ್ಟಡವು ಸಂಪೂರ್ಣ ಬಿದ್ದು ಹೋಗಿದೆ. ಮೂರು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಚೇರಿ ಕೆಲಸ ನಡೆಯುತ್ತಿದೆ. ಕಂದಾಯ ಇಲಾಖೆಯ ಕಟ್ಟಡವಾಗಿದ್ದು ಅಲ್ಲಿ ಹೊಸ ಕಟ್ಟಡ ನಿರ್ಮಿಸಬೇಕು’ ಎಂದು ಮನವಿ ಮಾಡಿದ್ದಾರೆ.
‘ಬಹಳ ವರ್ಷಗಳಿಂದ ಪಾಶ್ಚಾಪುರ ಗ್ರಾಮದಲ್ಲಿ ನಿವೇಶನದ ಬೇಡಿಕೆ ಇದ್ದು, ಇಲ್ಲಿನ ಜನಸಾಮಾನ್ಯರಿಗೆ ಗ್ರಾಮಮಟ್ಟದಲ್ಲಿ ನಿವೇಶನ ನೀಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಆದೇಶ ನೀಡಬೇಕು. 11ಎ 11ಬಿ ಆಸ್ತಿಯ ಈಗಿನ ಹೊಸ ‘ಬಿ’ ಖಾತಾ ಉತಾರವನ್ನು ಹುಕ್ಕೇರಿ ತಾಲ್ಲೂಕಿನಾದ್ಯಂತ ಆರಂಭ ಮಾಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.