ನಿಪ್ಪಾಣಿ: ‘ಸ್ಕಿಲ್ ಪ್ಲಸ್ ಪ್ಲೇಸ್‍ಮೆಂಟ್ ಲ್ಯಾಬ್‍ನ ಅಭಿವೃದ್ಧಿಗಾಗಿ ಎಚ್‍ಡಿಎಫ್‍ಸಿ ಬ್ಯಾಂಕ್ ಪರಿವರ್ತನ್ ಯೋಜನೆಯಡಿಯಲ್ಲಿ ಸುಮಾರು ₹20 ಲಕ್ಷವನ್ನು ಕೌಶಲಾಭಿವೃದ್ಧಿ ಮತ್ತು ಉದ್ಯೋಗ ಅವಕಾಶಗಳ ಸೃಷ್ಟಿಗಾಗಿ ವಿನಿಯೋಜಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಬೆಳಗಾವಿಯ ಎಚ್‍ಡಿಎಫ್‍ಸಿ ಬ್ಯಾಂಕ್‍ನ ಕ್ಲಸ್ಟರ್ ಮುಖ್ಯಸ್ಥ ಗಂಗಾಧರ ಹೆಗಡೆ ಹೇಳಿದರು.
ಕೆಎಲ್‍ಇ ಸಂಸ್ಥೆಯ ಸ್ಥಳೀಯ ಜಿ.ಐ. ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಎಚ್‍ಡಿಎಫ್‍ಸಿ ಬ್ಯಾಂಕ್‍ನ ‘ಪರಿವರ್ತನ್’ ಯೋಜನೆ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್ ಸಹಯೋಗದಲ್ಲಿ ಸ್ಕಿಲ್ ಪ್ಲಸ್ ಪ್ಲೇಸ್‍ಮೆಂಟ್ ಲ್ಯಾಬ್‍ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈವರೆಗೂ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೆಎಲ್‍ಇ ಸಂಸ್ಥೆಯ ಜಿ.ಐ. ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ತರಬೇತಿ ನೀಡಲಾಗಿದೆ’ ಎಂದರು.
ಬೆಳಗಾವಿಯ ಕೆಎಲ್‍ಇ ಸಂಸ್ಥೆ ಆಡಳಿತ ಮಂಡಳಿಯ ನಿರ್ದೇಶಕ ಪ್ರವೀಣ(ಅಮರ) ಬಾಗೇವಾಡಿ ಉದ್ಘಾಟಿಸಿದರು. ಡಾ. ಎಸ್.ಎಂ. ರಾಯಮಾನೆ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಮಹೇಶ ಬಾಗೇವಾಡಿ, ಎಚ್‍ಡಿಎಫ್‍ಸಿ ಬ್ಯಾಂಕ್‍ನ ಸ್ಥಳೀಯ ಶಾಖಾ ವ್ಯವಸ್ಥಾಪಕ ವಿಠ್ಠಲ ಶಿಂದೆ, ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್‍ನ ಸ್ಥಳೀಯ ಕ್ಲಸ್ಟರ್ ಹೆಡ್ ಶಿವಪ್ಪ ಪಾಟೀಲ, ತರಬೇತುದಾರ ಮಹಾಲಿಂಗ ಮಯಣ್ಣವರ, ಸ್ನೇಹಾ ಜೊಡಟ್ಟಿ, ಪ್ಲೇಸ್‍ಮೆಂಟ್ ಅಧಿಕಾರಿ ಪ್ರೊ. ಶಂಕರ್ಮೂರ್ತಿ ಕೆ.ಎನ್, ವಿದ್ಯಾರ್ಥಿಗಳು, ಪೋಷಕರು ಇದ್ದರು. ಪ್ರೀತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಾಪ್ತಿ ರೊಡ್ಡ ಸ್ವಾಗತಿಸಿದರು. ಸಾಕ್ಷಿ ಮತ್ತು ವೈಭವ ನಿರೂಪಿಸಿದರು. ಅಬೋಲಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.