ADVERTISEMENT

ಬೆಳಗಾವಿ: ಪ್ರಭಾಕರ ಕೋರೆಗೆ ವಿದ್ಯಾ ವಾರೇಣ್ಯ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:12 IST
Last Updated 26 ಫೆಬ್ರುವರಿ 2026, 5:12 IST
ಬೆಂಗಳೂರಿನಲ್ಲಿ ಈಚೆಗೆ ವ್ಯಾಪ್ಸ್‌ ಅಕ್ಷಯ ಫೌಂಡೇಷನ್‌ ಟ್ರಸ್ಟ್‌ ಬೆಳ್ಳಿಹಬ್ಬದಲ್ಲಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ‘ವ್ಯಾಪ್ಸ್‌ ಗ್ರೂಫ್‌ ವಿದ್ಯಾ ವಾರೇಣ್ಯ ಪ್ರಶಸ್ತಿ’ ಪ್ರದಾನ ಮಾಡಿತು
ಬೆಂಗಳೂರಿನಲ್ಲಿ ಈಚೆಗೆ ವ್ಯಾಪ್ಸ್‌ ಅಕ್ಷಯ ಫೌಂಡೇಷನ್‌ ಟ್ರಸ್ಟ್‌ ಬೆಳ್ಳಿಹಬ್ಬದಲ್ಲಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ‘ವ್ಯಾಪ್ಸ್‌ ಗ್ರೂಫ್‌ ವಿದ್ಯಾ ವಾರೇಣ್ಯ ಪ್ರಶಸ್ತಿ’ ಪ್ರದಾನ ಮಾಡಿತು   

ಬೆಳಗಾವಿ: ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್‌ನ ಡಾ.ಬಾಬು ರಾಜೇಂದ್ರ ಪ್ರಸಾದ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ದಲ್ಲಿ ಈಚೆಗೆ ಜರುಗಿದ ವ್ಯಾಪ್ಸ್‌ ಅಕ್ಷಯ ಫೌಂಡೇಷನ್‌ ಟ್ರಸ್ಟ್‌ ಬೆಳ್ಳಿಹಬ್ಬದಲ್ಲಿ, ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಮೋಘ ಕೊಡುಗೆಗೆ ‘ವ್ಯಾಪ್ಸ್‌ ಗ್ರೂಫ್‌ ವಿದ್ಯಾ ವಾರೇಣ್ಯ ಪ್ರಶಸ್ತಿ’ ಪ್ರದಾನ ಮಾಡಿತು.

 ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌, ಮೈಸೂರು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕೋರೆಯವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಡಾ.ಪರಿತೋಷ ಕನ್ನಿಂಗ್‌, ಡಾ.ಅನೀಲ ಕುಮಾರ, ಸುನೀಲ ಶಾಸ್ತ್ರಿ ಹಾಗೂ ವಾಪ್ಸ್‌ ಗ್ರೂಫ್‌ನ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT