ADVERTISEMENT

ಕಟ್ಟಡ ನಿರ್ಮಾಣಕ್ಕೆ ಮುಂದಾದ ಕಂಪನಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 14:40 IST
Last Updated 12 ಫೆಬ್ರುವರಿ 2020, 14:40 IST
ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವರದಿ
ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವರದಿ   

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕು ನಿಡಗುಂಡಿ ಗ್ರಾಮದ ಅಂಬೇಡ್ಕರ್‌ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಿಸಿಕೊಡಲು ಬೆಂಗಳೂರಿನ ‘ಎಕ್ಯುರೆಕ್ಸ್’ ಎನ್ನುವ ಖಾಸಗಿ ಕಂಪನಿ ಮುಂದೆ ಬಂದಿದೆ.

ಮಾದರಿಯಾಗಿ ರೂಪಗೊಂಡಿರುವ ಈ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಕೊರತೆ ಇರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ ಗಮನಿಸಿದ ಆ ಕಂಪನಿಯ ಅಧ್ಯಕ್ಷ ಕೆ.ಎನ್. ರಾಮ್‌ಮೋಹನ್ ಹಾಗೂ ಅವರ ಸ್ನೇಹಿತ ಗುರುಲಿಂಗ ಅಮ್ಮಣಗಿ ಶಾಲೆಗೆ ಬುಧವಾರ ಭೇಟಿ ನೀಡಿದರು. 120 ಮಕ್ಕಳಿಗೂ ಪೆನ್ಸಿಲ್, ರಬ್ಬರ್, ಶಾರ್ಪ್‌ನರ್‌ಗಳನ್ನು ವಿತರಿಸಿದರು. ಶಾಲೆಯಲ್ಲಿನ ವ್ಯವಸ್ಥೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

‘ಶಾಲೆಯ ಆವರಣದಲ್ಲಿ 30x17 ಅಳತೆಯ ತರಗತಿ ಕೊಠಡಿ ನಿರ್ಮಿಸಿಕೊಡುವುದಾಗಿ ಅವರು ತಿಳಿಸಿದರು. ಗುತ್ತಿಗೆದಾರರೊಂದಿಗೂ ಮಾತನಾಡಿ ಒಪ್ಪಂದ ಮಾಡಿಕೊಂಡರು’ ಎಂದು ಮುಖ್ಯಶಿಕ್ಷಕ ವೀರಣ್ಣ ಮಡಿವಾಳರ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.