ADVERTISEMENT

ಜ್ಞಾನಾಭಿವೃದ್ಧಿಗೆ ‘ಪ್ರಜಾವಾಣಿ’ ಪೂರಕ: ನೀಲಕಂಠ ಭೂಮಣ್ಣವರ

ಪ್ರೊ.ನೀಲಕಂಠ ಭೂಮಣ್ಣವರ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಮೇ 2025, 13:59 IST
Last Updated 15 ಮೇ 2025, 13:59 IST
ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ  ಪ್ರಜಾವಾಣಿ ಪತ್ರಿಕೆ ವಿತರಿಸಲಾಯಿತು. ಪ್ರೊ.ನೀಲಕಂಠ ಭೂಮಣ್ಣವರ, ಉಪನ್ಯಾಸಕ ವೀರೇಶ್ ಹಿರೇಮಠ ಭಾಗವಹಿಸಿದ್ದರು
ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ  ಪ್ರಜಾವಾಣಿ ಪತ್ರಿಕೆ ವಿತರಿಸಲಾಯಿತು. ಪ್ರೊ.ನೀಲಕಂಠ ಭೂಮಣ್ಣವರ, ಉಪನ್ಯಾಸಕ ವೀರೇಶ್ ಹಿರೇಮಠ ಭಾಗವಹಿಸಿದ್ದರು   

ಹುಕ್ಕೇರಿ: ‘ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಪ್ರಜಾವಾಣಿ ಪೂರಕವಾಗಿದೆ. ಪ್ರತಿದಿನ ಪ್ರಜಾವಾಣಿ  ಓದುವುದರಿಂದ ನಮಗೆ ಪ್ರಸ್ತುತ ವಿದ್ಯಮಾನ ತಿಳಿದುಕೊಳ್ಳಲು ಹಾಗೂ ಜ್ಞಾನ ವೃದ್ಧಿಸಿಕೊಳ್ಳಲು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು  ಸಹಕಾರಿಯಾಗಲಿದೆ’ ಎಂದು .ನೀಲಕಂಠ ಭೂಮಣ್ಣವರ ಹೇಳಿದರು.

ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಾಶ್ಚಾಪುರದಲ್ಲಿ ಇತಿಹಾಸ ವಿಭಾಗದ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕುರಿತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ನಾವೆಲ್ಲ ವಿದ್ಯಾರ್ಥಿ ಜೀವನದಲ್ಲಿ ಪ್ರಜಾವಾಣಿ ಓದುತ್ತಿದ್ದೇವು. ಕನ್ನಡ ಪತ್ರಿಕೆಗಳಲ್ಲಿ ಪ್ರಜಾವಾಣಿ ವಿಶ್ವಾಸಾರ್ಹ ಪತ್ರಿಕೆಯಾಗಿದೆ’ ಎಂದರು.

ADVERTISEMENT

‘ಇಂದಿನ ವಿದ್ಯುನ್ಮಾನ, ಅಂತರ್ಜಾಲ, ತಂತ್ರಜ್ಞಾನದ ಸಂದರ್ಭದಲ್ಲಿಯೂ ಪ್ರಜಾವಾಣಿ ತನ್ನ ಕನ್ನಡ ನಾಡಿನ ಜನರ ವಿಶ್ವಾಸ ಉಳಿಸಿಕೊಂಡಿದೆ. ಹಾಗಾಗಿ ಪ್ರತಿದಿನ ವಿದ್ಯಾರ್ಥಿಗಳು ಪತ್ರಿಕೆ ಕೊಂಡು ಓದಬೇಕು’ ಎಂದು ಸಲಹೆ ನೀಡಿದರು.

ಇತಿಹಾಸ ವಿಭಾಗದ ಉಪನ್ಯಾಸಕ ವೀರೇಶ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಜಾವಾಣಿ ದಿನಪತ್ರಿಕೆಯ ಮಹತ್ವ ಕುರಿತು ವಿತರಿಸಿದರು. ಪತ್ರಿಕೆಯಲ್ಲಿ ಬರುವ ವಿಷಯದ ಕುರಿತು ವಿಶೇಷ ತಿಳಿವಳಿಕೆ ನೀಡಿದರು.

ಎಲ್ಲ ವಿದ್ಯಾರ್ಥಿಗಳಿಗೆ ಇತಿಹಾಸ ವಿಭಾಗದಿಂದ ಪ್ರಜಾವಾಣಿ ಪತ್ರಿಕೆ ವಿತರಿಸಿ ಮೊದಲನೆ ಪುಟದಿಂದ ಕೊನೆಯ ಪುಟದವರಿಗೆ ಯಾವ ವಿಷಯ ಒಳಗೊಂಡಿರುತ್ತದೆ. ಅವುಗಳನ್ನ ಯಾವ ರೀತಿ ನೋಟ್ಸ್ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ತೆಗೆದುಕೊಳ್ಳಲು ಪ್ರಜಾವಾಣಿ ದಿನಪತ್ರಿಕೆ ಹೇಗೆ ಅನುಕೂಲವಾಗಿದೆ ಎಂದು ವಿವರಿಸಿದರು.

ಬಿ.ಎ, ಬಿ.ಕಾಂ ಮತ್ತು ಬಿ.ಎಸ್.ಸಿ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಾಚಾರ್ಯ, ಎಲ್ಲ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.