ADVERTISEMENT

ತಿಂಗಳೊಳಗ ಶೌಚಗೃಹ ನಿರ್ಮಿಸುತ್ತೇವೆ: ಬಿಇಒ ದಾಸಪ್ಪನವರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 16:08 IST
Last Updated 6 ಜನವರಿ 2024, 16:08 IST

ಬೆಳಗಾವಿ: ತಾಲ್ಲೂಕಿನ ಕಂಗ್ರಾಳಿ ಖುರ್ದ್‌ನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ದಾಸಪ್ಪನವರ ಶುಕ್ರವಾರ ಭೇಟಿ ನೀಡಿ, ಶೌಚಗೃಹ ಕೊರತೆಯಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆ ಕುರಿತು ಮಾಹಿತಿ ಸಂಗ್ರಹಿಸಿದರು.

‘ವಿದ್ಯಾರ್ಥಿಗಳಿಗೆ ಉಂಟಾಗಿರುವ ಸಮಸ್ಯೆ ಬಗೆಹರಿಸುವ ಸಂಬಂಧ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರೊಂದಿಗೆ ಚರ್ಚಿಸಿದ್ದೇವೆ. ಶಿಕ್ಷಕರಿಂದಲೂ ಮಾಹಿತಿ ಕಲೆಹಾಕಿದ್ದೇವೆ. ಯಾವುದಾದರೂ ಸರ್ಕಾರಿ ಅನುದಾನದಲ್ಲಿ ಒಂದು ತಿಂಗಳೊಳಗೆ ಹೆಚ್ಚುವರಿ ಶೌಚಗೃಹ ನಿರ್ಮಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುತ್ತೇವೆ’ ಎಂದು ದಾಸಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು. ಶಿಕ್ಷಣ ಸಂಯೋಜಕರಾದ ಆರ್‌.ಎಂ.ಚಲವಾದಿ, ಬಸವರಾಜ ಬಡಿಗೇರ ಇತರರಿದ್ದರು.

ಶೌಚಗೃಹದ ಅಭಾವದಿಂದಾಗಿ ಈ ಶಾಲೆಯಲ್ಲಿನ 354 ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಕುರಿತಾಗಿ ‘ಪ್ರಜಾವಾಣಿ’ ಜ.4ರ ಸಂಚಿಕೆಯಲ್ಲಿ ‘ಶೌಚಗೃಹದ ಮುಂದೆ ವಿದ್ಯಾರ್ಥಿಗಳ ಸರತಿ ಸಾಲು’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.