ಮೂಡಲಗಿ: ‘ವಿದ್ಯಾರ್ಥಿಗಳಲ್ಲಿ ಹಲವು ವಿಷಯಗಳ ಜ್ಞಾನದೊಂದಿಗೆ ಭಾಷೆ ಮತ್ತು ಸಾಮಾನ್ಯ ಜ್ಞಾನ ಬೆಳೆಸಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ’ಪ್ರಜಾವಾಣಿ’ ದಿನಪತ್ರಿಕೆ ಅತ್ಯಂತ ಮಹತ್ವದ ಪಾತ್ರವ ವಹಿಸುತ್ತದೆ’ ಎಂದು ಗೋಕಾಕದ ಸಾಹಿತಿ ವಿದ್ಯಾ ರೆಡ್ಡಿ ಅವರು ಹೇಳಿದರು.
ತಾಲ್ಲೂಕಿನ ನಾಗನೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪಟ್ಟಣ ಪಂಚಾಯಿತಿ ಪ್ರಾಯೋಜಿಸಿರುವ ’ಪ್ರಜಾವಾಣಿ’ ಎಸ್‌ಎಸ್‌ಎಲ್‌ಸಿ ದಿಕ್ಸೂಚಿ ಶೈಕ್ಷಣಿಕ ಮಾರ್ಗದರ್ಶಿ ಪತ್ರಿಕೆ ಬಿಡುಗಡೆ ಮತ್ತು ಅದರ ಪರಿಚಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸವಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಬರುವ ವಿಷಯಗಳು ಆತ್ಮವಿಶ್ವಾಸ ಹೆಚ್ಚಿಸುತ್ತದೆ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿ ದಿಕ್ಸೂಚಿಯಾಗಿದೆ ಎಂದರು.
ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸೂಕ್ತವಾದ ಪತ್ರಿಕೆ ಎಂದರೆ ಅದು ಪ್ರಜಾವಾಣಿಯಾಗಿದೆ. ಪತ್ರಿಕೆಗಳಲ್ಲಿ ಬರುವ ಲೇಖನಗಳು ಮಾಹಿತಿಪೂರ್ಣವಾಗಿರುತ್ತವೆ ಮತ್ತು ಸಂಗ್ರಾಹ್ಯಯೋಗ್ಯವಾದ ಪತ್ರಿಕೆ ಎನ್ನುವ ಹೆಗ್ಗಳಿಕೆ ಪಡೆದಿದೆ ಎಂದರು.
ಗ್ರಾಮದ ಮುಖಂಡರಾದ ಪರಸಪ್ಪ ಬಬಲಿ ಅವರು ಮಾತನಾಡಿ ನಿಜವಾದ ಪ್ರತಿಭೆಗಳು ಗ್ರಾಮೀಣ ಭಾಗದಲ್ಲಿ ಇದ್ದು, ಅವರಿಗೆ ಮಾರ್ಗದರ್ಶನವನ್ನು ನೀಡುವುದರಿಂದ ಅವರನ್ನು ಉನ್ನತ ಮಟ್ಟಕ್ಕೆ ಬೆಳೆಸಬಹುದಾಗಿದೆ. ಪ್ರಜಾವಾಣಿ ಪತ್ರಿಕೆಯು ಗ್ರಾಮೀಣ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿಯನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ಪ್ರಜಾವಾಣಿ ಪತ್ರಿಕೆಯನ್ನು ಓದುವುದರಿಂದ ಸಮರ್ಥ ನಾಗರಿಕರನ್ನಾಗಿಸುತ್ತದೆ ಎಂದರು.
ಪ್ರಜಾವಾಣಿ ದಿಕ್ಸೂಚಿಯಲ್ಲಿ ಎಸ್‌ಎಸ್‌ಎಲ್‌ಸಿಯ ಕನ್ನಡ, ಇಂಗ್ಲಿಷ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಕುರಿತು ಪರಿಣಿತರಿಂದ ಸಿದ್ಧಗೊಳಿಸಿದ್ದ ಮಾರ್ಗದರ್ಶಿ ಇದ್ದು, ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತವಾಗಿದೆ ಎಂದು ಹೇಳಿದರು.
ಗ್ರಾಮದ ಯುವ ಮುಖಂಡ ಚನಗೌಡ ಯರಗಣವಿ ಅವರು ವಿದ್ಯಾರ್ಥಿಗಳಿಗೆ ಪ್ರಜಾವಾಣಿ ದಿಕ್ಸೂಚಿ ಶೈಕ್ಷಣಿಕ ಮಾರ್ಗದರ್ಶಿ ಪತ್ರಿಕೆಯನ್ನು ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಾತನಾಡಿದ ಅವರು ‘ನಾಗನೂರ ಪಟ್ಟಣ ಪಂಚಾಯಿತಿಯಿಂದ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಸ್‌ಎಲ್‌ಸಿ ಓದುತ್ತಿರುವ ಮಕ್ಕಳಿಗೆ ಪ್ರಜಾವಾಣಿ ಪತ್ರಿಕೆಯನ್ನು ಪ್ರಾಯೋಜನೆ ಮಾಡಿರುವುದು ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ಪತ್ರಿಕೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅತಿಥಿ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪತ್ರಿಕೆ ಓದು ಮತ್ತು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳವಲ್ಲಿ ಓದಿನ ಮಹತ್ವ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್. ಗೋಸಬಾಳ, ಶಿಕ್ಷಕರಾದ ಎಸ್.ಆರ್. ಬೆಳಗಲಿ, ಎಸ್.ಸಿ. ಚಿಮ್ಮಟ ಹಾಗೂ ಪ್ರಜಾವಾಣಿ ಪತ್ರಿಕೆಯ ಬೆಳಗಾವಿ ಗ್ರಾಮೀಣ ಭಾಗದ ಪ್ರಸರಣಾಧಿಕಾರಿ ಮಂಜುನಾಥ ದಿವಟಗಿ ಇದ್ದರು. ಎ.ಡಿ. ಗುಡ್ಲಿ ಸ್ವಾಗತಿಸಿದರು, ಲವ ತಡಸನವರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.