ADVERTISEMENT

‘ಕಾರ ಹುಣ್ಣಿಮೆ’ ಆಚರಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 12:10 IST
Last Updated 2 ಜೂನ್ 2020, 12:10 IST
ತೆಲಸಂಗ ಗ್ರಾಮದಲ್ಲಿ ಮಂಗಳವಾರ ನಡೆದ ಸಂತೆಯಲ್ಲಿ ರೈತರು ‘ಕಾರ ಹುಣ್ಣಿಮೆ’ ಸಂಭ್ರಮಕ್ಕೆ ಬೇಕಾದ ಪರಿಕರಗಳನ್ನು ಖರೀದಿಸಿದರು
ತೆಲಸಂಗ ಗ್ರಾಮದಲ್ಲಿ ಮಂಗಳವಾರ ನಡೆದ ಸಂತೆಯಲ್ಲಿ ರೈತರು ‘ಕಾರ ಹುಣ್ಣಿಮೆ’ ಸಂಭ್ರಮಕ್ಕೆ ಬೇಕಾದ ಪರಿಕರಗಳನ್ನು ಖರೀದಿಸಿದರು   

ತೆಲಸಂಗ: ಕೊರೊನಾ ಭೀತಿಯ ನಡುವೆಯೂ ‘ಕಾರ ಹುಣ್ಣಿಮೆ’ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ರೈತರು ತಯಾರಿ ನಡೆಸಿದ್ದು ಮಂಗಳವಾರ ಇಲ್ಲಿನ ಸಂತೆಯಲ್ಲಿ ಕಂಡುಬಂತು.

ಹಬ್ಬಕ್ಕಾಗಿ ರೈತರು ಎತ್ತುಗಳು ಸೇರಿದಂತೆ ಜಾನುವಾರುಗಳನ್ನು ಸಿಂಗಾರ ಮಾಡಲು ಮುಖ್ಯ ಬಜಾರದಲ್ಲಿ ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸಿದರು. ಮತಾಟಿ, ಮಗಡಾ, ಮೂಗುದಾರ, ಬಾರುಕೋಲು, ಗಂಟಿ, ಹಗ್ಗಗಳು ಸೇರಿದಂತೆ ಕೃಷಿ ಕೆಲಸಕ್ಕೆ ಬೇಕಾಗುವ ಸಾಮಗ್ರಿ ಮತ್ತು ಎತ್ತುಗಳ ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು. ಕನ್ನಾಳ, ಬನ್ನೂರ, ಕೊಟ್ಟಲಗಿ, ಕಕಮರಿ, ಫಡತರವಾಡಿ, ಹಾಲಳ್ಳಿ, ಕಿಲಾರದಡ್ಡಿ ಮೊದಲಾದ ಗ್ರಾಮಗಳ ಕೃಷಿಕರು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT