ಬೆಳಗಾವಿ: ‘ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಯುಕ್ತ, ಜೆಎನ್ಎಂಸಿ ಕ್ಯಾಂಪಸ್‌ನ ಡಾ.ಕೋಡ್ಕಣಿ ಸಭಾಂಗಣದಲ್ಲಿ ಮೇ 10ರಂದು ‘ಭಾರತದ ಸಂವಿಧಾನ@75: ಸಂವಿಧಾನಾತ್ಮಕತೆಯನ್ನು ಪುನರ್ ಆವಿಷ್ಕರಿಸುವುದು’ ವಿಷಯ ಕುರಿತು ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಪ್ರಾಚಾರ್ಯೆ ಜ್ಯೋತಿ ಹಿರೇಮಠ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 10ಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ವರಾಳೆ ಸಮ್ಮೇಳನ ಉದ್ಘಾಟಿಸುವರು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು’ ಎಂದರು.
‘ಸಮ್ಮೇಳನದಲ್ಲಿ ನಡೆಯುವ ಸಂವಾದಗಳಲ್ಲಿ ಕೇರಳದ ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಅಂಬೇಡ್ಕರ್ ಚೇರ್‌ನ ಅಧ್ಯಕ್ಷ ಪ್ರೊ.ಕೆ.ವಿಕ್ರಮನ್ ನಾಯರ್, ಬೆಂಗಳೂರಿನ ನಿಟ್ಟೆ ಎಜ್ಯುಕೇಷನ್ ಟ್ರಸ್ಟ್‌ನ ಉಪಾಧ್ಯಕ್ಷ ಪ್ರೊ.ಸಂದೀಪ್ ಶಾಸ್ತ್ರಿ, ಪ್ರೊ.ಕೆ.ಆರ್.ಐತಾಳ, ಪ್ರೊ.ಸಿ.ರಾಜಶೇಖರ ತಮ್ಮ ವಿಚಾರ ಮಂಡಿಸುವರು. ಇಡೀ ಸಮ್ಮೇಳನದಲ್ಲಿ 22 ಪ್ರಬಂಧ ಮಂಡನೆಯಾಗಲಿವೆ. ಉತ್ತಮವಾಗಿ ಪ್ರಬಂಧ ಮಂಡಿಸಿದವರಿಗೆ ಸಮಾರೋಪ ಕಾರ್ಯಕ್ರಮದಲ್ಲಿ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು’ ಎಂದು ವಿವರಿಸಿದರು.
‘20ಕ್ಕೂ ಅಧಿಕ ಕಾಲೇಜಿನ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವರು’ ಎಂದರು.
ಉಮಾ ಹಿರೇಮಠ, ಸುಪ್ರಿಯಾ ಸ್ವಾಮಿ, ಆಕಾಶ ಅಮರಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.