ADVERTISEMENT

ಖಾಸಗಿ ಬಸ್ ಪಲ್ಟಿ: ಇಬ್ಬರು ಪ್ರಯಾಣಿಕರ ಸಾವು, 11 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:13 IST
Last Updated 30 ಆಗಸ್ಟ್ 2025, 5:13 IST
ಹಿರೇಬಾಗೇವಾಡಿ ಸಮಿಪದ ಬಡೇಕೊಳ್ಳ ಕ್ರಾಸ್ ಬಳಿ ಬುಧವಾರ  ರಾತ್ರಿ ಪಲ್ಟಿಯಾಗಿದ್ದ ಬಸ್‌ ಅನ್ನು ಕ್ರೇನ್ ಸಹಾಯದಿಂದ ತೆರವು ಗೊಳಿಸಲಾಯಿತು
ಹಿರೇಬಾಗೇವಾಡಿ ಸಮಿಪದ ಬಡೇಕೊಳ್ಳ ಕ್ರಾಸ್ ಬಳಿ ಬುಧವಾರ  ರಾತ್ರಿ ಪಲ್ಟಿಯಾಗಿದ್ದ ಬಸ್‌ ಅನ್ನು ಕ್ರೇನ್ ಸಹಾಯದಿಂದ ತೆರವು ಗೊಳಿಸಲಾಯಿತು   

ಹಿರೇಬಾಗೇವಾಡಿ (ಬೆಳಗಾವಿ): ಬಡೇಕೊಳ್ಳ ಕ್ರಾಸ್ ಬಳಿ ಬುಧವಾರ ರಾತ್ರಿ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಸೇರಿ 11 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ವಾಸವಿರುವ ಗದಗ ನಗರದ ಹೀನಾ ಸಲೀಮಶೇಖ್ ಮುಲ್ಲಾ(31) ಹಾಗೂ ಧಾರವಾಡದ ಪ್ರಶಾಂತ ಮಲ್ಲಿಕಾರ್ಜುನ ಮಡಿವಾಳರ (32) ಮೃತರು. ಹುಬ್ಬಳ್ಳಿಯಿಂದ ಪುಣೆ ಕಡೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ಮೇಲಿಂದ ಕೆಳಗೆ ಸರ್ವೀಸ್ ರಸ್ತೆಗೆ ಬಿದ್ದು ಅವಫಾತ ಸಂಭವಿಸಿದೆ.

ಗಾಯಾಳುಗಳು: ದಾವಣಗೇರಿ ಹರಿಹರದ ಎಸ್.ಆರ್.ಶ್ರೇಯಾ(23), ಹುಬ್ಬಳ್ಳಿಯ ಶ್ರದ್ದಾ ರಾಜೇಂದ್ರ ಮೆಹರವಾಡೆ(29),ಧಾರವಾಡದ ಸಂಜನಾ ಶಿವರುದ್ರಪ್ಪ ಪಟ್ಟಣ(25), ಪುಣೆಯ ಆದಿನಾರಾಯಣ ವೆಂಕಟಸುಬ್ಬಯ್ಯ ಮೇರಮ್ (32), ಬೆಂಗಳೂರು ಜಯನಗರದ ಹೃಷಿಕೇಶಿ ಕಾಮತ್ ಉರುನಕರ್(19), ಸವದತ್ತಿಯ ಸುರಜಸಿಂಗ್ ಬಾಳಾಸಿಂಗ್ ರಜಪೂತ(34), ಅಳ್ಳಾವರದ ತಾಕೀರಅಹ್ಮದ ಜೈಲಾನಿ ಸುದರ್ಜಿ(16) ಮತ್ತು ಅಬ್ದುಲಮೋಹಿಜ್ ಜಾಕಿರಹುಸೆನ ಮುಜಾವರ(13), ಗದಗನ ಮಹ್ಮದಉಮರ್ ಮಹ್ಮದಇದ್ರೀಸ ಮುಲ್ಲಾ(33), ಪರ್ವತಗೌಡಾ ನೀಲನಗೌಡ ಕತ್ತಿ(23) ಬಸ್ ಚಾಲಕ ನಿಪ್ಪಾಣಿಯ ನಿತಿನ ರಾವಸಾಹೇಬ ಮಾನೆ(28) ಗಾಯಗೊಂಡಿದ್ದು ಇವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ಹಿರೇಬಾಗೇವಾಡಿ ಪೊಲೀಸರು ತಿಳಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.