ADVERTISEMENT

ಬೆಳಗಾವಿ| ಸೌಂದರ್ಯ ವರ್ಧಕ ಕ್ಷೇತ್ರದಲ್ಲಿವೆ ಅವಕಾಶ: ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 7:19 IST
Last Updated 10 ಆಗಸ್ಟ್ 2023, 7:19 IST
ಬೆಳಗಾವಿಯ ಕೆಎಲ್ಇ ಫಾರ್ಮಸಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ‘ಮೇಕ್ ಎ ಕೆರಿಯರ್ ಇನ್ ಕಾಸ್ಮೆಟಿಕ್ ಸೈನ್ಸಸ್’ ಕುರಿತ ಕಾರ್ಯಾಗಾರವನ್ನು ಅಕ್ಷಯ ತಲಾಠಿ ಉದ್ಘಾಟಿಸಿದರು
ಬೆಳಗಾವಿಯ ಕೆಎಲ್ಇ ಫಾರ್ಮಸಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ‘ಮೇಕ್ ಎ ಕೆರಿಯರ್ ಇನ್ ಕಾಸ್ಮೆಟಿಕ್ ಸೈನ್ಸಸ್’ ಕುರಿತ ಕಾರ್ಯಾಗಾರವನ್ನು ಅಕ್ಷಯ ತಲಾಠಿ ಉದ್ಘಾಟಿಸಿದರು   

ಬೆಳಗಾವಿ: ಇಲ್ಲಿನ ಕೆಎಲ್ಇ ಕನ್ವೆನ್ಷನ್‌ ಹಾಲ್‌ನಲ್ಲಿ ಬುಧವಾರ ಕೆಎಲ್ಇ ಫಾರ್ಮಸಿ ಕಾಲೇಜಿನ ಕಾಸ್ಮೆಟಿಕ್ ಸೈನ್ಸ್ (ಸೌಂದರ್ಯ ವರ್ಧಕಗಳ ವಿಜ್ಞಾನ) ವಿಭಾಗವು ‘ಮೇಕ್ ಎ ಕೆರಿಯರ್ ಇನ್ ಕಾಸ್ಮೆಟಿಕ್ ಸೈನ್ಸಸ್’ ವಿಷಯ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.

ನ್ಯೂಯಾರ್ಕ್‌ನ ಬ್ಯೂಟಿ ಅಂಡ್‌ ವೆಲ್‌ನೆಸ್‌ನ ರಿಸರ್ಚ್ ಅಂಡ್‌ ಡೆವಲಪ್ಮೆಂಟ್ ಉಪಾಧ್ಯಕ್ಷ ಅಕ್ಷಯ ತಲಾಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಪ್ರಸ್ತುತ ವಿದ್ಯಮಾನದಲ್ಲಿ ಸೌಂದರ್ಯ ವರ್ಧಕಗಳ ವಿಜ್ಞಾನ ವಿಭಾಗದ ಮಹತ್ವ ಪಡೆದಿದೆ. ಜಾಗತಿಕವಾಗಿ ಸೌಂದರ್ಯ ವರ್ಧಕ ಉದ್ಯಮಗಳಲ್ಲಿ ವೃತ್ತಿ ಅವಕಾಶಗಳು ಹೆಚ್ಚಾಗಿವೆ. ಭಾರತದಲ್ಲಿಯೂ ಸೌಂದರ್ಯ ವರ್ಧಕಗಳ ವಿಜ್ಞಾನ ವಿಭಾಗದಲ್ಲಿ  ಸಂಶೋಧನೆಗಳು ಗಮನಾರ್ಹವಾಗಿವೆ’ ಎಂದರು.

ಕೆಎಲ್‌ಇ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಎಸ್. ಗಣಾಚಾರಿ, ಕೆಎಲ್ಇ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಸುನೀಲ ಜಲಾಲ್‌ಪುರೆ, ಉಪ ಪ್ರಾಂಶುಪಾಲರಾದ ಡಾ.ಎಂ.ಬಿ. ಪಾಟಿಲ ಸಿಬ್ಬಂದಿ ಇದ್ದರು. ಪ್ರಾಂಶುಪಾಲ ಡಾ.ಸುನೀಲ ಜಲಾಲ್‌ಪುರೆ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ರವಿಕಿರಣ ಕಣಬರ್ಗಿ ವಂದಿಸಿದರು. ಸುಮಾರು 300 ಪ್ರತಿನಿಧಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.