ADVERTISEMENT

ಪೌರ ಕಾರ್ಮಿಕರ ಮುಷ್ಕರಕ್ಕೆ ನವನಿರ್ಮಾಣ ಸೇನೆಯ ಬೆಂಬಲ

​ಪ್ರಜಾವಾಣಿ ವಾರ್ತೆ
Published 30 ಮೇ 2025, 14:52 IST
Last Updated 30 ಮೇ 2025, 14:52 IST
ಮೂಡಲಗಿಯಲ್ಲಿ ನಾಲ್ಕನೇ ದಿನಕ್ಕೆ ಮುಂದುವರೆದ ಪೌರ ಕಾರ್ಮಿಕರ ಮುಷ್ಕರಕ್ಕೆ ಶುಕ್ರವಾರ ಬೆಂಬಲ ನೀಡಿದ ಕರ್ನಾಟಕ ನವನಿರ್ಮಾಣ ಸೇನೆಯವರು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಮನವಿ ನೀಡಿದರು. 
ಮೂಡಲಗಿಯಲ್ಲಿ ನಾಲ್ಕನೇ ದಿನಕ್ಕೆ ಮುಂದುವರೆದ ಪೌರ ಕಾರ್ಮಿಕರ ಮುಷ್ಕರಕ್ಕೆ ಶುಕ್ರವಾರ ಬೆಂಬಲ ನೀಡಿದ ಕರ್ನಾಟಕ ನವನಿರ್ಮಾಣ ಸೇನೆಯವರು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಮನವಿ ನೀಡಿದರು.    

ಮೂಡಲಗಿ: ಮೂಡಲಗಿ ಪುರಸಭೆಯ ಪೌರ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪುರಸಭೆ ಆವರಣದಲ್ಲಿ ಮಾಡುತ್ತಿರುವ ಮುಷ್ಕರವು ಶುಕ್ರವಾರ ನಾಲ್ಕನೇ ದಿನಕ್ಕೆ ಮುಂದುವರಿಯಿತು.

ಕರ್ನಾಟಕ ನವನಿರ್ಮಾಣ ಸೇನೆಯು ಪೌರ ಕಾರ್ಮಿಕರ ಮುಷ್ಕರಕ್ಕೆ ಬೆಂಬಲವನ್ನು ನೀಡಿ ಮುಷ್ಕರದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ನವನಿರ್ಮಾಣ ಸೇನೆಯ ತಾಲ್ಲೂಕು ಅಧ್ಯಕ್ಷ ಸಚಿನ ಲಂಕೆನ್ನವರ ಮಾತನಾಡಿ, ‘ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರವು ಬೇಗನೆ ಈಡೇರಿಸಬೇಕು. ಪೌರ ಕಾರ್ಮಿಕರ ಸೇವೆಯು ಅಮೂಲ್ಯವಾಗಿದೆ. ಅವರ ಸೇವೆಯಿಂದ ಊರು, ನಗರಗಳು ಸ್ವಚ್ಛವಾಗಿರಲು ಮತ್ತು ರೋಗಮುಕ್ತವಾಗಿರಲು ಸಾಧ್ಯ ಎಂದರು.

ADVERTISEMENT

ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ವಿಳಂಬ ಮಾಡಿದರೆ ಕರ್ನಾಟಕ ನವನಿರ್ಮಾಣ ಸೇನೆಯು ಅವರೊಂದಿಗೆ ಹೋರಾಟ ಮಾಡುತ್ತದೆ ಎಂದು ಲಂಕೆನ್ನವರ ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಪ್ರತಿಭಟನಾಕಾರರು ಮನವಿಯನ್ನು ನೀಡಿದರು.

ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಯಶವಂತ ಶಿದ್ಲಿಂಗಪ್ಪಗೋಳ, ಉಪಾಧ್ಯಕ್ಷ ಶಿವಬೋಧ ಕಪ್ಪಲಗುದ್ದಿ, ಪ್ರಕಾಶ ಮಾಳಾಗೋಳ, ಕರ್ನಾಟಕ ನವನಿರ್ಮಾಣ ಸೇನೆಯ ವಿಠ್ಠಲ ನಾಯಕ, ರಾಜು ಬೆಳಕೂಡ, ಮಂಜು ಸವಸುದ್ದಿ, ಲಕ್ಕಪ್ಪ ನಾಯಕ, ಅಕ್ಷಯ ನೇಮಗೌಡರ, ಶಿವಬೋಧ ಲಕ್ಷ್ಮೇಶ್ವರ, ಕೃಷ್ಣಾ ನಾಯಿಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.