ಬೆಳಗಾವಿ: ಇಲ್ಲಿನ ಸುವರ್ಣ ವಿಧಾನ ಸೌಧದ ಪಾವಿತ್ರ್ಯ ಹಾಳಾಗಿದೆ ಎಂದು ಆರೋಪಿಸಿ, ಸೋಮವಾರ ಶುದ್ಧೀಕರಣ ಮಾಡಲು ಮುಂದಾಗಿದ್ದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ಕಾಯಿ, ಕರ್ಪೂರ, ಹಾರ, ಊದುಬತ್ತಿ, ಅರಿಷಿನ–ಕುಂಕುಮ ಹಾಗೂ ನೀರು ತಂದಿದ್ದ ರೈತ ಮುಖಂಡರು, ಘೋಷಣೆ ಕೂಗುತ್ತ ಸುವರ್ಣ ಸೌಧ ಪ್ರವೇಶ ಮಾಡಲು ಯತ್ನಿಸಿದರು. 'ಅವಾಚ್ಯ ಪದಗಳ ಬಳಕೆಯಿಂದ ಸುವರ್ಣ ಸೌಧ ಮಲಿನಗೊಂಡಿದೆ. ಅದನ್ನು ಶುಚಿ ಮಾಡುತ್ತೇವೆ’ ಎಂದು ಘೋಷಣೆ ಕೂಗಿದರು.
ಪೊಲೀಸರು ಒಳಗೆ ಬಿಡದಿದ್ದಾಗ ಗೇಟ್ ಮುಂದೆಯೇ ಶುಚಿಗೊಳಿಸಲು ಮುಂದಾದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
ಮುಖಂಡ ಪ್ರಕಾಶ ನಾಯಿಕ ನೇತೃತ್ವದಲ್ಲಿ ಸೋಮು ರೈನಾಪುರೆ, ಕಿಶನ್ ನಂದಿ, ಮೊಹಮ್ಮದ್ ಜೂಟದಾರ್, ಆಸ್ಮಾ ಜೂಟದಾರ್, ಸುರೇಶ ಮರಿಯಕಾಚೆ, ಈರಣ್ಣ ಹಣಮಂತಗೌಡ ಪಾಟೀಲ, ಸುರೇಶ ಪರಗಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.