ADVERTISEMENT

ಕ್ವಾರಂಟೈನ್‌ ವಾರ್ಡ್‌ ಸ್ಥಾಪನೆಗೆ ಸ್ಥಳೀಯರ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 12:51 IST
Last Updated 5 ಏಪ್ರಿಲ್ 2020, 12:51 IST
   

ಬೆಳಗಾವಿ: ನಿಜಾಮುದ್ದೀನ್‌ ಮರ್ಕಜ್‌ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ವಾಪಸ್‌ ಬಂದಿದ್ದಾರೆ ಎಂದು ಹೇಳಲಾದ 5 ಜನರನ್ನು ಇಲ್ಲಿನ ಲಾಡ್ಜ್‌ನಲ್ಲಿ ಕ್ವಾರಂಟೈನ್‌ದಲ್ಲಿ (ಗೃಹ ನಿಗಾ) ಇರಿಸಲು ಮುಂದಾಗಿದ್ದ ಆರೋಗ್ಯಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸ್ಥಳೀಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.

ನಗರದ ಶೆಟ್ಟಿ ಗಲ್ಲಿಯಲ್ಲಿರುವ ಲಾಡ್ಜ್‌ವೊಂದರಲ್ಲಿ ಕ್ವಾರಂಟೈನ್‌ ವಾರ್ಡ್‌ ಸ್ಥಾಪಿಸಲು ಅಧಿಕಾರಿಗಳು ಮುಂದಾಗಿದ್ದರು. ಬೆಳಿಗ್ಗೆ ಬಂದು ಸ್ಥಳ ಪರಿಶೀಲಿಸಿದರು. ಇದನ್ನು ವೀಕ್ಷಿಸಿದ ಅಕ್ಕಪಕ್ಕದ ನಿವಾಸಿಗಳು, ಬೀದಿಗಿಳಿದು ವಾಗ್ವಾದಕ್ಕೆ ಇಳಿದರು.

‘ಜನವಸತಿ ಇರುವಂತಹ ಪ್ರದೇಶದಲ್ಲಿ ಇವರನ್ನು ಇಡಬಾರದು. ಊರ ಹೊರಗೆ, ಜನಸಂದಣಿ ಇಲ್ಲದಂತಹ ಸ್ಥಳದಲ್ಲಿ ಇರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಜನರ ತೀವ್ರ ವಿರೋಧ ಗಮನಿಸಿದ ಅಧಿಕಾರಿಗಳು ಅಲ್ಲಿಂದ ಕಾಲ್ಕಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.