ADVERTISEMENT

ಜನಪ್ರತಿನಿಧಿಗಳು ಅಸಹಾಯಕರಿಗೆ ಆಸರೆಯಾಗಬೇಕು: ಮಹಾಂತೇಶ ಕವಟಗಿಮಠ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 14:57 IST
Last Updated 27 ಅಕ್ಟೋಬರ್ 2021, 14:57 IST
ಚಿಕ್ಕೋಡಿಯಲ್ಲಿ ರಾಜೀವ್‌ಗಾಂದಿ ವಸತಿ ನಿಗಮದಿಂದ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರಗಳನ್ನು ವಿತರಿಸಲಾಯಿತು. ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಅಲ್ಲಮಪ್ರಭು ಸ್ವಾಮೀಜಿ, ಸಂಪಾದನಾ ಸ್ವಾಮೀಜಿ ಮೊದಲಾದವರು ಇದ್ದಾರೆ
ಚಿಕ್ಕೋಡಿಯಲ್ಲಿ ರಾಜೀವ್‌ಗಾಂದಿ ವಸತಿ ನಿಗಮದಿಂದ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರಗಳನ್ನು ವಿತರಿಸಲಾಯಿತು. ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಅಲ್ಲಮಪ್ರಭು ಸ್ವಾಮೀಜಿ, ಸಂಪಾದನಾ ಸ್ವಾಮೀಜಿ ಮೊದಲಾದವರು ಇದ್ದಾರೆ   

ಚಿಕ್ಕೋಡಿ: ‘ಜನಪ್ರತಿನಿಧಿಗಳಾದವರು ಬಡವರು, ಅಸಹಾಯಕರು, ನಿರ್ಗತಿಕರು, ವಿಧವೆಯರು ಮತ್ತು ಅಂಗವಿಕಲರಿಗೆ ಆಸರೆಯಾಗಿರಬೇಕು’ ಎಂದುವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ಪಟ್ಟಣದ ಸಿ.ಎಸ್.ಎಸ್. ಶಾಲೆ ಆವರಣದಲ್ಲಿ ರಾಜೀವ್‌ಗಾಂದಿ ವಸತಿ ನಿಗಮದಿಂದ ದೇವರಾಜ ಅರಸು ವಿಷೇಶ ವಸತಿ ಯೋಜನೆ ಅಡಿ ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ವಿವಿಧ ಗ್ರಾಮದ ಫಲಾನುಭವಿಗಳಿಗೆ (ವಸತಿರಹಿತ ವಿಧವೆಯರಿಗೆ) ಮನೆಗಳ ಹಕ್ಕುಪತ್ರಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.

‘ವಸತಿ ಯೋಜನೆಯಲ್ಲಿ ಹಕ್ಕುಪತ್ರ ತಲುಪಿಸಿದಾಗ ಫಲಾನುಭವಿಗಳ ಕಣ್ಣಲ್ಲಿ ಅನಂದ ಭಾಷ್ಪ ಕಂಡಿದ್ದೇನೆ. ಅವರ ಆಶೀರ್ವಾದದಿಂದ‌ 2ನೇ ಬಾರಿಗೆ ಆಯ್ಕೆಯಾಗಿ ಜನಸೇವೆ ಮಾಡುತ್ತಿದ್ದೇನೆ’ ಎಂದರು.

ADVERTISEMENT

‘ಪ್ರಸ್ತುತ ಸಾಲಿನಲ್ಲಿ 1,726 ಮನೆಗಳನ್ನು ಜಿಲ್ಲೆಗೆ ಮಂಜೂರು ಮಾಡಲಾಗಿದೆ’ ಎಂದು ತಿಳಿಸಿದರು.

‘ಸಮಾಜದಿಂದ ತುಳಿತಕ್ಕೊಳಗಾದವರು, ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ದೇವರಾಜ ಅರಸು ವಿಶೇಷ ವಸತಿ ಯೋಜನೆ ಜಾರಿಯಾಗಿದೆ. ನನ್ನ ಕಾರ್ಯ ವಾಪ್ತಿಯಲ್ಲಿ ರಾಜ್ಯದ 10ಸಾವಿರ ಗುರಿಯಲ್ಲಿ 8ಸಾವಿರ ಮನೆಗಳನ್ನು ಬೆಳಗಾವಿ ಜಿಲ್ಲೆಗೆ ತರುವ ಪ್ರಯತ್ನ ಮಾಡಿದ್ದೇನೆ. ಈ ಯೋಜನೆಯನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸಿ ಸಮಾಜದ ಋಣ ತೀರಿಸಲು ಮುಂದಾಗಿದ್ದೇನೆ’ ಎಂದು ಹೇಳಿದರು.

‘2019ರಲ್ಲಿ ಪ್ರವಾಹದಿಂದ ಹಾನಿಗೊಳಗಾದ ಮನೆ ‘ಸಿ’ ಪಟ್ಟಿಯಲ್ಲಿದ್ದರೆ, 2021ರ ಪ್ರವಾಹದಿಂದ ಹೆಚ್ಚಿನ ಹಾನಿಯಾಗಿದ್ದರೆ ‘ಎ’ ಹಾಗೂ ‘ಬಿ’ ಪಟ್ಟಿಯಲ್ಲಿ ಸೇರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ’ ಎಂದರು.

ಚಿಂಚಣಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿದರು.

ಸಿ.ಬಿ. ಕೋರೆ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭರತ ಬನವಣೆ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್‌ ನೇಮಿನಾಥ ಗೆಜ್ಜೆ, ಅಂಕಲಿ ಗ್ರಾ.ಪಂ. ಅಧ್ಯಕ್ಷೆ ಶೈಲಜಾ ಪಾಟೀಲ ಇದ್ದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂಭವಿ ಅಶ್ವಥಪೂರ ಹಾಡಿದರು. ವಕೀಲ ಸತೀಶ ಅಪ್ಪಾಜಿಗೋಳ ಸ್ವಾಗತಿಸಿದರು. ಕಲ್ಮೇಶ ಕಾಂಬಳೆ ನಿರೂಪಿಸಿದರು. ಎಸ್.ಬಿ ಉಕಲಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.