ADVERTISEMENT

ಹುಕ್ಕೇರಿ ಹಿರೇಮಠಕ್ಕೆ ರಾಹುಲ್ ಜಾರಕಿಹೊಳಿ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 15:46 IST
Last Updated 22 ಏಪ್ರಿಲ್ 2024, 15:46 IST
ಹುಕ್ಕೇರಿ ಹಿರೇಮಠಕ್ಕೆ ಸೋಮವಾರ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಭೇಟಿ ನೀಡಿದಾಗ ಮಠಾಧ್ಯಕ್ಷ ಚಂದ್ರಶೇಖರ್ ಸ್ವಾಮೀಜಿ ಸತ್ಕರಿಸಿದರು
ಹುಕ್ಕೇರಿ ಹಿರೇಮಠಕ್ಕೆ ಸೋಮವಾರ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಭೇಟಿ ನೀಡಿದಾಗ ಮಠಾಧ್ಯಕ್ಷ ಚಂದ್ರಶೇಖರ್ ಸ್ವಾಮೀಜಿ ಸತ್ಕರಿಸಿದರು    

ಹುಕ್ಕೇರಿ: ಪಟ್ಟಣದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೆ ಸಚಿವ ಸತೀಶ ಜಾರಕಿಹೊಳಿ ಪುತ್ರ, ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಭೇಟಿ ನೀಡಿ ಗುರುಶಾಂತೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧಿಪತಿ ಚಂದ್ರಶೇಖರ ಸ್ವಾಮೀಜಿ ಆಶೀರ್ವಾದ ಪಡೆದರು.

ಸಹೋದರಿ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮತ ಚಲಾಯಿಸುವಂತೆ ಸಂತೆಯಲ್ಲಿ ಮತದಾರರಲ್ಲಿ ವಿನಂತಿಸಿದರು. 
 
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಧುರೀಣ ರಿಷಭ ಪಾಟೀಲ್, ಶಾನೂಲ್ ತಹಸೀಲ್ದಾರ್, ಮಹೇಶ ಗುಮಚಿ, ವಿರೂಪಾಕ್ಷಿ ಮರೆನ್ನವರ, ಬಸವರಾಜ ರಂಗಣ್ಣವರ, ಮಂಜು ನಾಯಿಕ, ಮಲ್ಲಪ್ಪ ಗಜಬರ, ಸದಾಶಿವ್ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.

ಹುಕ್ಕೇರಿ ಹಿರೇಮಠಕ್ಕೆ ಸೋಮವಾರ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಭೇಟಿ ನೀಡಿದರು. ಮಠಾಧ್ಯಕ್ಷ ಚಂದ್ರಶೇಖರ್ ಸ್ವಾಮೀಜಿ ರಿಷಬ್ ಪಾಟೀಲ್ ಶಾನೂಲ್ ತಹಸೀಲ್ದಾರ್ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT