ADVERTISEMENT

ಉಗರಗೋಳ: ಮಳೆಯಿಂದ ಹಾನಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 16:05 IST
Last Updated 10 ಸೆಪ್ಟೆಂಬರ್ 2020, 16:05 IST
ಉಗರಗೋಳದಲ್ಲಿ ಹೊಲ ಗದ್ದೆಗಳಿಗೆ ಮಳೆ ನೀರು ನುಗ್ಗಿದೆ
ಉಗರಗೋಳದಲ್ಲಿ ಹೊಲ ಗದ್ದೆಗಳಿಗೆ ಮಳೆ ನೀರು ನುಗ್ಗಿದೆ   

ಉಗರಗೋಳ (ಸವದತ್ತಿ ತಾಲ್ಲೂಕು): ಗ್ರಾಮದ ಸುತ್ತಮುತ್ತ ಮೂರು ದಿನಗಳಿಂದ ಸುರಿದ ಮಳೆಗೆ ಇಲ್ಲಿನ ಹೆಗ್ಗೋಳ್ಳದ ಎರಡು ಗುಡ್ಡಗಳ ನಡುವೆ ನಿರ್ಮಿಸಿದ್ದ ಚಿಕ್ಕ ಡ್ಯಾಂ ಒಡೆದ ಪರಿಣಾಮ, ನೀರು ಹೊಲ ಗದ್ದೆಗಳಿಗೆ ನುಗ್ಗಿದೆ. ಇದರಿಂದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ.

ಹೆಗ್ಗೋಳ್ಳ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯು ನೀರಿನ ರಭಸಕ್ಕೆ ಹಾಳಾಗಿದೆ. ಗ್ರಾಮದಲ್ಲಿ ಸವಣೂರು ನವಾಬರು ಕಟ್ಟಿಸಿದ ಕೆರೆ ಸಂಪೂರ್ಣ ತುಂಬಿ ಹೆಚ್ಚಾದ ನೀರು ಕೆಳಗಿನ ಹೊಲಗದ್ದೆಗಳಿಗೆ ನುಗ್ಗಿದ್ದರಿಂದ ಅವು ಕೆರೆಯಂತಾಗಿವೆ. ಹಳ್ಳದ ನೀರಿನ ರಭಸಕ್ಕೆ ಗೋವಿನ ಜೋಳ, ಕಬ್ಬು, ಚೆಂಡು ಹೂವು ಮೊದಲಾದ ಬೆಳೆಗಳು ನೀರು ಪಾಲಾಗಿದ್ದು, ಸಮರ್ಪಕ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT