ADVERTISEMENT

ಬೆಳಗಾವಿ ನಗರದಲ್ಲಿ ಆಗಾಗ ಅಬ್ಬರಿಸಿದ ಮಳೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 14:23 IST
Last Updated 10 ಆಗಸ್ಟ್ 2019, 14:23 IST

ಬೆಳಗಾವಿ: ನಗರದಲ್ಲಿ ಶನಿವಾರ ಆಗಾಗ ಜೋರು ಮಳೆ ಬಿದ್ದಿತು.

ಬೆಳಿಗ್ಗೆಯಿಂದ ಆಗಾಗ ಸಾಧಾರಣ ಮಳೆಯಾಯಿತು. ಆದರೆ ಸಂಜೆ 4.30ರ ನಂತರ ಜೋರಾಗಿ ಸುರಿಯಿತು. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಸುಧಾರಿಸಿಕೊಳ್ಳುತ್ತಿದ್ದ ಜನರು ಮತ್ತೆ ಸಂಕಷ್ಟಕ್ಕೆ ಒಳಗಾಗಬೇಕಾಯಿತು.

ಮರಾಠಾ ಕಾಲೊನಿ, ಸಮರ್ಥನಗರ, ಕಪಿಲೇಶ್ವರ ಕಾಲೊನಿ ಮೊದಲಾದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನವರು ಪರದಾಡುವಂತಾಯಿತು. ಅಜಂನಗರ, ಶಾಹುನಗರ ಮುಖ್ಯ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ಕಾಲುವೆಯಂತೆ ಹರಿಯಿತು. ವಾಹನಗಳ ಸಂಚಾರಕ್ಕೆ ತೊಡಕಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.