
ರಾಮದುರ್ಗದ ಮೂಲಕ ಸಾಗಿ ಹೋಗುವ ಲೋಕಾಪುರ–ಧಾರವಾಡ ರೈಲ್ವೆ ಮಾರ್ಗದ ನಕ್ಷೆ
ರಾಮದುರ್ಗ: ಪಟ್ಟಣಕ್ಕೆ ರೈಲು ಮಾರ್ಗ ಬರಬೇಕು ಎನ್ನುವ ಎರಡು ದಶಕಗಳ ಕನಸು ಇನ್ನೂ ನನಸಾಗಿಲ್ಲ. ಈ ಮಧ್ಯೆ, ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವ್ಯವಸ್ಥಾಪಕರು, ಲೋಕಾಪುರ–ಧಾರವಾಡ ಹೊಸ ರೈಲು ಮಾರ್ಗದ ಸಲುವಾಗಿ ಮರು ಸಮೀಕ್ಷೆಗೆ ಸೂಚನೆ ನೀಡಿರುವುದು ಇಲ್ಲಿನ ನಾಗರಿಕರಲ್ಲಿ ಹೊರ ಭರವಸೆ ಮೂಡಿಸಿದೆ.
ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಮತ್ತು ರೈಲ್ವೆ ಹೋರಾಟ ಸಮಿತಿ ಸದಸ್ಯರು, ಹುಬ್ಬಳ್ಳಿಯಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ ಲೋಕಾಪುರ–ಧಾರವಾಡ ರೈಲ್ವೆ ಮಾರ್ಗದ ಕುರಿತು ಮಾಹಿತಿ ನೀಡಿದರು. ದಟ್ಟಣೆ, ವಾಣಿಜ್ಯ ಮತ್ತು ತಾಂತ್ರಿಕ ಸಮೀಕ್ಷೆಗಳು ಸರಿಯಾಗಿ ನಡೆಸಲಾಗಿಲ್ಲ. ಇದರಿಂದ ಈ ಭಾಗದ ರೈಲ್ವೆ ಪ್ರೇಮಿಗಳು ಮರು ಸಮೀಕ್ಷೆಯನ್ನು ಮುಂದಿಟ್ಟುಕೊಂಡು ರೈಲ್ವೆ ಮಾರ್ಗದ ಹೋರಾಟ
ನಡೆಸಿದ್ದರು.
ಬಾಗಲಕೋಟೆಯಿಂದ ಕುಡಚಿವರೆಗೆ ಹೊಸ ರೈಲ್ವೆ ಮಾರ್ಗ ಲೋಕಾಪುರದ ತನಕ ನಿರ್ಮಾಣ ಆಗುತ್ತಿದೆ. ಬಾಗಲಕೋಟೆ–ಕುಡಚಿ ಮಾರ್ಗದ ಹೋರಾಟಗಾರ ಕುತುಬುದ್ದೀನ್ ಖಾಜಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಲೋಕಾಪುರದಿಂದ ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಹೊಸ ರೈಲ್ವೆ ಹೋರಾಟಕ್ಕೆ ಮುಂದಾಗಿದ್ದಾರೆ.
ಉತ್ತರ ಕರ್ನಾಟಕದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾದ ಲೋಕಾಪುರ–ಧಾರವಾಡ ರೈಲ್ವೆ ಯೋಜನೆಗಳನ್ನು ಜಾರಿಗೆ ತರಬೇಕು. ಬಾಗಲಕೋಟೆಯಿಂದ ಕುಡಚಿಯವರೆಗೆ ರೈಲ್ವೆ ಮಾರ್ಗ ಮಂಜೂರಾಗಿದೆ. ಇದೇ ಯೋಜನೆಯನ್ನು ವಿಸ್ತರಿಸಿ ಲೋಕಾಪುರ–ಧಾರವಾಡ ರೈಲು ಮಾರ್ಗ ನಿರ್ಮಿಸಲು ಸಕಾರಾತ್ಮಕ ಸೂಚನೆಗಳು ರೈಲ್ವೆ ಅಧಿಕಾರಿಗಳಿಂದ ಹೊರ ಬರಲು ಹೋರಾಟಗಾರರು ಸಂಸದ ಜಗದೀಶ ಶೆಟ್ಟರ ಅವರ ಸಹಾಯ ಪಡೆದುಕೊಂಡಿದ್ದಾರೆ.
ದಟ್ಟಣೆ, ವಾಣಿಜ್ಯ ಮತ್ತು ತಾಂತ್ರಿಕ ಸಮೀಕ್ಷೆಗಳು ರೈಲು ಮಾರ್ಗ ನಿರ್ಮಾಣಕ್ಕೆ ಪೂರಕವಾಗಿದ್ದರೂ ಸಮೀಕ್ಷೆ ಮಾತ್ರ ರಾಮದುರ್ಗದ ಜನತೆಯ ವಿರುದ್ಧವಾಗಿ, ರೈಲು ಮಾರ್ಗಕ್ಕೆ ಹಿನ್ನಡೆಯಾಗಿತ್ತು. ಆದರೆ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರ ಮುತುವರ್ಜಿಯಿಂದಾಗಿ ಲೋಕಾಪುರದಿಂದ ಧಾರವಾಡಕ್ಕೆ ಎಷ್ಟು ಪ್ರಮಾಣದಲ್ಲಿ ಜನದಟ್ಟಣೆ ಇದೆ ಎಂದು ಸಮೀಕ್ಷೆ ಮಾಡಲು ಹುಬ್ಬಳ್ಳಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಈ ಭಾಗದ ರೈಲ್ವೆ ಪ್ರೇಮಿಗಳಿಗೆ ಹರ್ಷ ತಂದಿದೆ.
ಲೋಕಾಪುರ–ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ರಾಮದುರ್ಗದ ಸುತ್ತ ಇರುವ ಗುಡ್ಡ ಕೊರೆಯಬೇಕಾಗುತ್ತದೆ. ಅದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂಬ ನೆಪವನ್ನು ಈಚೆಗೆ ಅಧಿಕಾರಿಗಳು ಹೇಳಿದ್ದಾರೆ. ಆದರೆ, ವಾಸ್ತವವಾಗಿ ಇಲ್ಲಿ ಗುಡ್ಡ ಕೊರೆಯುವ ಪ್ರಶ್ನೆಯೇ ಬರುವುದಿಲ್ಲ ಎಂಬುದು ರಾಮದುರ್ಗ ತಾಲ್ಲೂಕು ಜನರ ಹೇಳಿಕೆ.
ಗೊಡಚಿ, ಶಬರಿಕೊಳ್ಳ, ಕಾಳಿಕಾ ದೇವಸ್ಥಾನ, ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಲು ಸಗಮ ದಾರಿ ಇದೆ. ಕೆಲಸ ಮಾಡುವುದನ್ನು ಬಿಟ್ಟು ಸುಳ್ಳು ಹೇಳುತ್ತಿರುವ ಅಧಿಕಾರಿಗಳ ಮೇಲೆ ಸಂಸದ ಜಗದೀಶ ಶೆಟ್ಟರ್ ಕ್ರಮ ಕೈಗೊಳ್ಳಬೇಕು ಎಂಬುದು ಅವರು ಆಗ್ರಹ.
ಲೋಕಾಪುರ– ಧಾರವಾಡ ಹೊಸ ರೈಲ್ವೆ ಮಾರ್ಗವನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ನಿರ್ಧಾರ ಮಾಡಿ ಅನುದಾನ ಮೀಸಲಿಡದಿದ್ದರೆ ಹೋರಾಟ ನಡೆಸಲಾಗುವುದುಕುತ್ಬುದ್ದೀನ ಖಾಜಿ, ಅಧ್ಯಕ್ಷ, ರಾಜ್ಯ ರೈಲ್ವೆ ಹೋರಾಟ ಸಮಿತಿ
ರಾಮದುರ್ಗ, ಸವದತ್ತಿ ತಾಲ್ಲೂಕಿನ ಕ್ಷೇತ್ರಗಳಿಗೆ ವರ್ಷದಲ್ಲಿ ಮೂರ್ನಾಲ್ಕು ಲಕ್ಷದಷ್ಟು ಭಕ್ತರು ಆಗಮಿಸಲಿದ್ದಾರೆ. ಭಕ್ತರ ಅನುಕೂಲಕ್ಕೆ ರೈಲು ಸಂಪರ್ಕ ಅವಶ್ಯವಿದೆಗೈಬು ಜೈನೆಖಾನ್, ಮುಖಂಡ, ರಾಮದುರ್ಗ ರೈಲ್ವೆ ಹೋರಾಟ ಸಮಿತಿ
ಮುಧೋಳ, ರಾಮದುರ್ಗ, ಸವದತ್ತಿ ತಾಲ್ಲೂಕುಗಳ ಸಕ್ಕರೆ ಹಾಗೂ ಸುಣ್ಣದ ಕಾರ್ಖಾನೆಯ ಉತ್ಪನ್ನ ಸಾಗಣೆ ಕಷ್ಟವಾಗಿದ್ದು, ರೈಲು ಸೇವೆ ಅನಿವಾರ್ಯ ಇದೆಮಹ್ಮದ್ ಶೆಫಿ ಬೆಣ್ಣಿ, ಮುಖಂಡ, ರೈಲ್ವೆ ಹೋರಾಟ ಸಮಿತಿ
ಗುಡ್ಡ ಕೊರೆಯಬೇಕಿದೆ ಎಂಬುದು ಸುಳ್ಳು. ಗೊಡಚಿ, ಶಬರಿಕೊಳ್ಳ, ಕಾಳಿಕಾ ದೇವಸ್ಥಾನ, ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಲು ಸಗಮ ದಾರಿ ಇದೆಎಂ.ಕೆ.ಯಾದವಾಡ, ಮುಖಂಡ, ರೈಲ್ವೆ ಹೋರಾಟ ಸಮಿತಿ
ಕಳೆದ ಸಾರಿ ಸಮೀಕ್ಷೆ ನಡೆಸಿದಾಗ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಮರು ಸಮೀಕ್ಷೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಜನರ ಕನಸು ಹಾಳುಮಾಡಬಾರದುಜಗದೀಶ ಶೆಟ್ಟರ್, ಸಂಸದ, ಬೆಳಗಾವಿ
ಗುಡ್ಡ ಕೊರೆಯಬೇಕಿದೆ ಎಂಬುದು ಸುಳ್ಳು. ಗೊಡಚಿ, ಶಬರಿಕೊಳ್ಳ, ಕಾಳಿಕಾ ದೇವಸ್ಥಾನ, ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಲು ಸಗಮ ದಾರಿ ಇದೆಎಂ.ಕೆ.ಯಾದವಾಡ, ಮುಖಂಡ, ರೈಲ್ವೆ ಹೋರಾಟ ಸಮಿತಿ
ಕಳೆದ ಸಾರಿ ಸಮೀಕ್ಷೆ ನಡೆಸಿದಾಗ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಮರು ಸಮೀಕ್ಷೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಜನರ ಕನಸು ಹಾಳುಮಾಡಬಾರದುಜಗದೀಶ ಶೆಟ್ಟರ್, ಸಂಸದ, ಬೆಳಗಾವಿ
ಮುಧೋಳ, ರಾಮದುರ್ಗ, ಸವದತ್ತಿ ತಾಲ್ಲೂಕುಗಳ ಸಕ್ಕರೆ ಹಾಗೂ ಸುಣ್ಣದ ಕಾರ್ಖಾನೆಯ ಉತ್ಪನ್ನ ಸಾಗಣೆ ಕಷ್ಟವಾಗಿದ್ದು, ರೈಲು ಸೇವೆ ಅನಿವಾರ್ಯ ಇದೆಮಹ್ಮದ್ ಶೆಫಿ ಬೆಣ್ಣಿ, ಮುಖಂಡ, ರೈಲ್ವೆ ಹೋರಾಟ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.