ADVERTISEMENT

ಸಂಗೊಳ್ಳಿ ರಾಯಣ್ಣ ಪುಣ್ಯತಿಥಿ: ನಂದಗಡಕ್ಕೆ ಭಕ್ತರ ಭೇಟಿ

ದಿನವಿಡೀ ವಿವಿಧ ಕಾರ್ಯಕ್ರಮ ಆಯೋಜನೆ; ಭಕ್ತರಿಗೆ ಪ್ರಸಾದ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 15:54 IST
Last Updated 26 ಜನವರಿ 2025, 15:54 IST
ಖಾನಾಪುರ ತಾಲ್ಲೂಕಿನ ನಂದಗಡದ ರಾಯಣ್ಣನ ಸಮಾಧಿ ಸ್ಥಳದಲ್ಲಿ ರಾಯಣ್ಣನ ಆತ್ಮಜ್ಯೋತಿ ಯಾತ್ರೆಯನ್ನು ಬೀಳ್ಕೊಡಲಾಯಿತು
ಖಾನಾಪುರ ತಾಲ್ಲೂಕಿನ ನಂದಗಡದ ರಾಯಣ್ಣನ ಸಮಾಧಿ ಸ್ಥಳದಲ್ಲಿ ರಾಯಣ್ಣನ ಆತ್ಮಜ್ಯೋತಿ ಯಾತ್ರೆಯನ್ನು ಬೀಳ್ಕೊಡಲಾಯಿತು   

ಖಾನಾಪುರ: ವೀರ ಸೇನಾನಿ ಸಂಗೊಳ್ಳಿ ರಾಯಣ್ಣನ ಪುಣ್ಯತಿಥಿ ಅಂಗವಾಗಿ ಭಾನುವಾರ ತಾಲ್ಲೂಕಿನ ನಂದಗಡ ಗ್ರಾಮದ ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳ ಮತ್ತು ಆತನನ್ನು ಗಲ್ಲಿಗೇರಿಸಿದ ಸ್ಥಳಕ್ಕೆ ಭಾನುವಾರ ರಾಯಣ್ಣನ ಅಸಂಖ್ಯಾತ ಭಕ್ತರು ಭೇಟಿ ನೀಡಿದರು.

ರಾಯಣ್ಣನ ಸಮಾಧಿ ಸ್ಥಳದಲ್ಲಿಇಡೀ ದಿನ ಅಭಿಮಾನಿಗಳು ಪುಣ್ಯ ಸ್ಮರಣೋತ್ಸವ ಆಚರಿಸಿದರು. ಭಕ್ತರು ಸಮಾಧಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.  ರಾಯಣ್ಣನ ಪುತ್ಥಳಿಗೆ ಪೂಜೆ, ಅಭಿಷೇಕ, ರಾಷ್ಟ್ರ ಧ್ವಜಾರೋಹಣ, ರಾಯಣ್ಣ ಹಾಗೂ ಆತನ ಸಹಚರರರಿಗೆ ನುಡಿನಮನ ಸಲ್ಲಿಸಲಾಯಿತು. ಮಧ್ಯಾಹ್ನ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಭಕ್ತರಿಗೆ ಪ್ರಸಾದ, ಸಂಜೆ ಮಂಗಳಾರತಿ, ಸಾಂಸ್ಕೃತಿಕ ಸಂಜೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಪುತ್ರ ಕಾಂತೇಶ, ಸಾಮಾಜಿಕ ಕಾರ್ಯಕರ್ತ ಸಿ.ಎ ರಮೇಶ, ಅಶೋಕ ಅಪ್ಪುಗೋಳ, ದೀಪಕ ಗುಡಗನಟ್ಟಿ ಹಾಗೂ ಇತರರು ಸಮಾಧಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಗಣ್ಯರನ್ನು ಗಡಿನಾಡು ಹಿತರಕ್ಷಣಾ ವೇದಿಕೆಯ ವತಿಯಿಂದ ಸತ್ಕರಿಸಲಾಯಿತು.

ADVERTISEMENT

ಸಂಗೊಳ್ಳಿ ರಾಯಣ್ಣ ಸ್ಮಾರಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಂಕರ ಸೊನೊಳ್ಳಿ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆ ಅಧ್ಯಕ್ಷ ರಾಜು ಖಾತೇದಾರ ಸ್ವಾಗತಿಸಿದರು. ಈರಯ್ಯ ಹಿರೇಮಠ ವಂದಿಸಿದರು.

ಸುನೀಲ ದ್ಯಾಮಗೌಡ, ವಿಕಾಸ ಹಟ್ಟಿಹೊಳಿ, ಮೋರೆಶ್ವರ ಮುನವಳ್ಳಿ, ನಿಲೇಶ ಸೋನೊಳ್ಳಿ, ಗೋವಿಂದ ಚವಾಣ ಸೇರಿದಂತೆ ನಂದಗಡ ಗ್ರಾಮ ಪಂಚಾಯಿತಿ ಸದಸ್ಯರು, ಹಾಲುಮತ ಒಕ್ಕೂಟದ ಪದಾಧಿಕಾರಿಗಳು, ನಂದಗಡ ಎಪಿಎಂಸಿ ಪದಾಧಿಕಾರಿಗಳು, ಸಂಗೊಳ್ಳಿ ರಾಯಣ್ಣ ಸನಿವಾಸ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ನಂದಗಡ ಹಾಗೂ ಬೆಳಗಾವಿ ಮಜಗಾವಿಯ ಯುವಕರು, ರಾಯಣ್ಣನ ಅಭಿಮಾನಿಗಳು ಇದ್ದರು. 

ಖಾನಾಪುರ ತಾಲ್ಲೂಕು ನಂದಗಡದ ರಾಯಣ್ಣನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಪುತ್ರ ಕಾಂತೇಶ ಅವರನ್ನು ಗಡಿನಾಡು ಹಿತರಕ್ಷಣಾ ವೇದಿಕೆಯಿಂದ ಸತ್ಕರಿಸಲಾಯಿತು

ರಾಯಣ್ಣ ಆತ್ಮಜ್ಯೋತಿ ಯಾತ್ರೆಗೆ ಬೀಳ್ಕೊಡುಗೆ

ಖಾನಾಪುರ: ನಂದಗಡದ ರಾಯಣ್ಣನ ಸಮಾಧಿಯಿಂದ ಬೈಲಹೊಂಗಲದ ವೀರರಾಣಿ ಕಿತ್ತೂರ ಚನ್ನಮ್ಮನ ಸಮಾಧಿ ಸ್ಥಳಕ್ಕೆ ಭಾನುವಾರ ತೆರಳಿದ ರಾಯಣ್ಣನ ಆತ್ಮಜ್ಯೋತಿ ಯಾತ್ರೆಗೆ ಆತನ ಸಮಾಧಿ ಸ್ಥಳದಿಂದ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಯಾತ್ರೆಯು ಬೀಡಿ ಕಿತ್ತೂರು ಸಂಗೊಳ್ಳಿ ಮಾರ್ಗವಾಗಿ ಬೈಲಹೊಂಗಲ ತಲುಪಿತು. ಬೈಲಹೊಂಗಲದ ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣೋತ್ಸವ ಸಮಿತಿಯಿಂದ ಏರ್ಪಡಿಸಿದ್ದ ಜ್ಯೋತಿಯಾತ್ರೆಗೆ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಸಮಿತಿಯ ಸಂಸ್ಥಾಪಕ  ಸಿ.ಕೆ.ಮೆಕ್ಕೇದ ಈಶ್ವರ ಹೋಟಿ ಕುಮಾರ ದೇಶನೂರ ರಾಜು ಸೊಗಲದ ಸೋಮನಾಥ ಸೊಪ್ಪಿಮಠ ಪೂಜೆ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರೋಹಿಣಿ ಪಾಟೀಲ ರಾಯಣ್ಣನ ಜ್ಯೋತಿಗೆ ಆರತಿ ಬೆಳಗುವ ಮೂಲಕ ಆತ್ಮಜ್ಯೋತಿ ಯಾತ್ರೆಗೆ  ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.