
ಪ್ರಜಾವಾಣಿ ವಾರ್ತೆ
ರಾಯಬಾಗ (ಬೆಳಗಾವಿ ಜಿಲ್ಲೆ): ಪಟ್ಟಣದ ತಹಶೀಲ್ದಾರ್ ಕಚೇರಿಯ ಎಸ್‌ಡಿಎ ಚಂದ್ರಶೇಖರ ಮುರಟಗಿ ₹80 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
‘ಭೂ ದಾಖಲೆ ಸಂಬಂಧಿಸಿದ ಕೆಲಸಕ್ಕೆ ₹ 1 ಲಕ್ಷ ನೀಡುವಂತೆ ರೈತ ಶಿವಾನಂದ ದುಂಡಗಿ ಅವರಿಗೆ ಆರೋಪಿಯು ಬೇಡಿಕೆ ಇಟ್ಟಿದ್ದರು. ₹80 ಸಾವಿರ ಲಂಚ ಪಡೆಯುವಾಗ ಕಾರ್ಯಾಚರಣೆ ನಡೆಸಿ, ಬಂಧಿಸಿದೆವು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ದಾಳಿ ವೇಳೆ ಕಚೇರಿಯ ಕೆಲ ದಾಖಲೆಗಳನ್ನು ಪರಿಶೀಲಿಸಿದ್ದು, ಮ್ಯೂಟೇಷನ್, ಪಹಣಿ ತಿದ್ದುಪಡಿ ಸೇರಿ ಕಂದಾಯಕ್ಕೆ ಸಂಬಂಧಿಸಿದ ಕಡತಗಳನ್ನು ವಶಕ್ಕೆ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.