ADVERTISEMENT

‘ರೆಡ್‌ಕ್ರಾಸ್‌ ಕೊಡುಗೆ ಅ‍‍ಪಾರ‘

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:11 IST
Last Updated 9 ಮೇ 2025, 15:11 IST
ಗೋಕಾಕನ  ಜೆ.ಎಸ್.ಎಸ್. ಪದವಿ ಮಹಾವಿದ್ಯಾಲಯದಲ್ಲಿ ನಡೆದ ʼವಿಶ್ವ ರೆಡ್ ಕ್ರಾಸ್ ದಿನ 2025ʼ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು
ಗೋಕಾಕನ  ಜೆ.ಎಸ್.ಎಸ್. ಪದವಿ ಮಹಾವಿದ್ಯಾಲಯದಲ್ಲಿ ನಡೆದ ʼವಿಶ್ವ ರೆಡ್ ಕ್ರಾಸ್ ದಿನ 2025ʼ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು   

ಗೋಕಾಕ: ‘ಸಮಾಜದಲ್ಲಾಗುವ ವಿಪತ್ತುಗಳಿಗೆ ಸ್ಪಂದಿಸುವ ಮೂಲಕ ಆರೋಗ್ಯ ಸೇವೆಗೆ ರೆಡ್‌ಕ್ರಾಸ್ ಸಂಸ್ಥೆಯ ಕೊಡುಗೆ ಅಪಾರವಾಗಿದೆ’ ಎಂದು ವೈದ್ಯ  ನವೀನ ಗೋಲಭಾವಿ ಹೇಳಿದರು.

ಇಲ್ಲಿನ ಗೋಕಾಕ ಶಿಕ್ಷಣ ಸಂಸ್ಥೆಯ ಜೆ.ಎಸ್.ಎಸ್. ಪದವಿ ಮಹಾವಿದ್ಯಾಲಯದಲ್ಲಿ ಯುವ ರೆಡ್‌ಕ್ರಾಸ್ ಘಟಕಗಳ ಸಹಯೋಗದಲ್ಲಿ ಗುರುವಾರ ನಡೆದ ‘ವಿಶ್ವ ರೆಡ್ ಕ್ರಾಸ್ ದಿನ-2025’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರೆಡ್‌ಕ್ರಾಸ್ ಸಂಸ್ಥೆಯು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದೆ. ಮಾನವೀಯತೆಯೇ ಅದರ ಮೂಲ ಧ್ಯೇಯ’ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಎಂ.ತುರಡಗಿ ಹೇಳಿದರು.

ADVERTISEMENT

ಅಂಕಿ ಸಂಯೋಜಕ ಡಾ.ಪಿ.ಪಿ. ಕಟ್ಟಿಮನಿ, ಯುವ ರೆಡ್‌ಕ್ರಾಸ್ ಪುರುಷ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಕೃಷ್ಣಮೂರ್ತಿ ಎಂ.ಎಸ್‌, ಎಂ.ವಿ.ಗೊರಗುದ್ದಿ, ಮಹಿಳಾ ಘಟಕದ ಅಧಿಕಾರಿ ಜ್ಯೋತಿ ಪೋಲಾಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.