ಕಾಗವಾಡ: ‘ತಾಲ್ಲೂಕಿನ ನದಿ ತೀರದ ಜುಗೂಳ, ಶಹಾಪೂರ ಮತ್ತು ಮಂಗಾವತಿ ಸೇರಿದಂತೆ ಪ್ರವಾಹ ಬಾಧಿತ ಪ್ರದೇಶಗಳ ಜನರ ಪುನರ್ವಸತಿಗೆ ಹಣ ನೀಡುವ ಚಿಂತನೆ ಸರ್ಕಾರದ್ದಾಗಿದೆ’ ಎಂದು ಶಾಸಕ ರಾಜು ಕಾಗೆ ಹೇಳಿದರು.
ತಾಲ್ಲೂಕಿನ ಕೃಷ್ಣಾ ಕಿತ್ತೂರ, ಬಣಜವಾಡ, ಕಾತ್ರಾಳ, ಮಂಗಾವತಿ, ಶಹಾಪೂರ ಗ್ರಾಮಗಳ ಕಾಳಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಅಗತ್ಯ ವಸ್ತು ವಿತರಿಸಿ, ಜುಗೂಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅನುಕೂಲ ಇರುವೆಡೆ ಸ್ಥಳಾಂತರವಾಗಬಹುದು’ ಎಂದರು.
‘ನದಿ ತೀರದ ಗ್ರಾಮಗಳಿಗೆ ಮುಲಸೌಕರ್ಯ ಒದಗಿಸಲು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ಮನವಿ ಮಾಡಲಾಗುವುದು’ ಎಂದರು.
ತಹಶೀಲ್ದಾರ್ ರಾಜೇಶ ಬುರ್ಲಿ, ನೋಡಲ್ ಅಧಿಕಾರಿ ಎಂ.ಆರ್. ಮುಂಜೆ, ಉಪತಹಶೀಲ್ದಾರ್ ಅಣ್ಣಾಸಾಬ್ ಕೋರೆ, ಮುಖಂಡರಾದ ಅಣ್ಣಾಸಾಬ್ ಪಾಟೀಲ, ಕಾಕಾಸಾಬ್ ಪಾಟೀಲ, ಉಮೇಶ ಪಾಟೀಲ ಇದ್ದರು.
ಪ್ರವಾಹ ಪೀಡಿತ ಗ್ರಾಮಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಬರುತ್ತಾರೆಂದು ಕಾದು ಕುಳಿತಿದ್ದ ಸಂತ್ರಸ್ತರು, ಬೇಸರದಿಂದ ಹಿಂದಿರುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.