ಬೆಳಗಾವಿ: ಇಲ್ಲಿನ ಹೊರವಲಯದ ಕಣಬರಗಿ ರಸ್ತೆಯಲ್ಲಿರುವ ಚಂದ್ರಮೌಳಿ ಕಾಲೊನಿಯಲ್ಲಿ ‘ವಿನಂತಿ ಮೇರೆಗೆ ಬಸ್ ನಿಲುಗಡೆ ಮಾಡಬೇಕು’ ಎಂದು ಕೋರಿ ಅಲ್ಲಿನ ನಿವಾಸಿಗಳ ಸಂಘದವರು ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಕ ಮಹಾದೇವಪ್ಪ ಮುಂಜಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
‘ಈ ಬಡಾವಣೆಯು ರುಕ್ಮಿಣಿ ನಗರ ಹಾಗೂ ಭಾರತ ಕಾಲೊನಿಯ ಮಧ್ಯದಲ್ಲಿ ಬರುತ್ತದೆ. 60ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುತ್ತಿವೆ. ಸಾರಿಗೆ ಬಸ್‌ಗಳನ್ನು ಶಿವತೀರ್ಥ ಅಪಾರ್ಟ್‌ಮೆಂಟ್ ಬಳಿ ನಿಲ್ಲಿಸಲಾಗುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಹೀಗಾಗಿ, ಬಡಾವಣೆಯಲ್ಲಿ ನಗರ ಸಾರಿಗೆ ಬಸ್‌ಗಳು ನಿಲುಗಡೆ ಮಾಡುವಂತೆ ನಿರ್ದೇಶನ ಕೊಡಬೇಕು’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.