ADVERTISEMENT

ಹುಕ್ಕೇರಿ: ₹7.14 ಲಕ್ಷ ಮೌಲ್ಯದ ಅಕ್ಕಿ ವಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 14:13 IST
Last Updated 11 ಜನವರಿ 2024, 14:13 IST
ಹುಕ್ಕೇರಿ ಹೊರವಲಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹7.14 ಲಕ್ಷ ಮೌಲ್ಯದ ಅಕ್ಕಿ ಹಾಗೂ ಟ್ರಕ್‌ನ್ನು ಆಹಾರ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಬುಧವಾರ ವಶಪಡಿಸಿಕೊಂಡರು
ಹುಕ್ಕೇರಿ ಹೊರವಲಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹7.14 ಲಕ್ಷ ಮೌಲ್ಯದ ಅಕ್ಕಿ ಹಾಗೂ ಟ್ರಕ್‌ನ್ನು ಆಹಾರ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಬುಧವಾರ ವಶಪಡಿಸಿಕೊಂಡರು   

ಹುಕ್ಕೇರಿ: ಪಟ್ಟಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 210 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡ ಘಟನೆ ಬುಧವಾರ ಜರುಗಿದೆ.

ಪಟ್ಟಣದ ಹೊರವಲಯದ ತೋಟದ ಮನೆಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿಡಲಾಗಿತ್ತು. ಮಾರಾಟ ಮಾಡಲು ಸಾಗಿಸುವಾಗ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ವೀರಭದ್ರ ಶೇಬನ್ನವರ, ಸಿಬ್ಬಂದಿಯಾದ ಇರ್ಫಾನ್ ಉಸ್ತಾದ್, ಲೋಕೇಶ್ ಡಾಂಗೆ ಮತ್ತು ಸ್ಥಳೀಯ ಪೋಲಿಸರು ದಾಳಿ ನಡೆಸಿ ₹7.14 ಲಕ್ಷ ಮೌಲ್ಯದ 420 ಚೀಲಗಳಲ್ಲಿ (ಒಂದೊಂದು ಪ್ಲಾಸ್ಟಿಕ್ ಚೀಲದಲ್ಲಿ 50 ಕೆಜಿಯಂತೆ) 210 ಕ್ವಿಂಟಾಲ್ ಪಡಿತರ ಅಕ್ಕಿ ಹಾಗೂ ₹15 ಲಕ್ಷ ಬೆಲೆ ಬಾಳುವ ಟ್ರಕ್ ವಶಪಡಿಸಿಕೊಂಡಿದ್ದಾರೆ.

ಟ್ರಕ್ ಚಾಲಕ ರಾಯಬಾಗ ತಾಲ್ಲೂಕಿನ ನಿಪನಾಳ ಗ್ರಾಮದ ಸಂತೋಷ ಶಿವಾಜಿ ಕುರಣಿ ಹಾಗೂ ಸ್ಥಳೀಯ ವ್ಯಾಪಾರಿ ರವಿ ಅವರ ಮೇಲೆ ದೂರು ದಾಖಲಾಗಿದೆ.

ADVERTISEMENT

ಎ.ಎಸ್.ಐ. ಕೆ.ಐ.ಗಣಾಚಾರಿ ಅವರು ಕಲಂ 7 ಅಗತ್ಯ ವಸ್ತುಗಳ ಕಾಯ್ದೆ 1955 ಹಾಗು ಕರ್ನಾಟಕ ಅವಶ್ಯ ವಸ್ತುಗಳ ನಿಯಂತ್ರಣ ಆದೇಶ 1992 ಅನುಬಂಧ 18 (ಎ) (ಬಿ) (ಸಿ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.