ADVERTISEMENT

ಹುಕ್ಕೇರಿ | ಹಿಡ್ಕಲ್ ಡ್ಯಾಂ, ಶಿರೂರ್ ಡ್ಯಾಂ ಒಳಹರಿವು ಹೆಚ್ಚಳ: ನದಿಗೆ ನೀರು

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 1:57 IST
Last Updated 18 ಜುಲೈ 2025, 1:57 IST
   

ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಕಾರಣ ತಾಲ್ಲೂಕಿನಲ್ಲಿ ಹರಿಯುವ ಘಟಪ್ರಭಾ, ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳ ಹರಿವು ಗುರುವಾರ ಹೆಚ್ಚಾಗಿದೆ.

ಶಿರೂರ್ ಡ್ಯಾಂ: ಮಾರ್ಕಂಡೇಯ ನದಿಗೆ ತಾಲ್ಲೂಕಿನ ಶಿರೂರ್ ಬಳಿ ನಿರ್ಮಿಸಿರುವ ಡ್ಯಾಂ ಗುರುವಾರ 2308.98 ಅಡಿ (2309.71ಅಡಿ ಗರಿಷ್ಟ) ಇತ್ತು. ಮುಂಜಾನೆ ಹನ್ನೊಂದರ ಸಮಯಕ್ಕೆ ಒಳಹರಿವು 2441 ಕ್ಯೂಸೆಕ್‌ ಇತ್ತು.

ಶೇ98.10ರಷ್ಟು ಭರ್ತಿ?: ಜಲಾಶಯವು ಗುರುವಾರ ಶೇ 98.10ರಷ್ಟು ಭರ್ತಿಯಾಗಿದ್ದು, ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕ್ರಸ್ಟ್ ಗೇಟ್ ಮೂಲಕ 2,500 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ ಎಂದು ಇಇ ಅರವಿಂದ ದೇಶಪಾಂಡೆ ಮತ್ತು ಎಇಇ ಪ್ರವೀಣ ಅರಳಿಕಟ್ಟಿ ತಿಳಿಸಿದರು.

ADVERTISEMENT

ಜಲಾಶಯ ಒಳಹರಿವು ಹೆಚ್ಚಾದಂತೆ ಮತ್ತೆ 5,000 ಕ್ಯೂಸೆಕ್ ವರೆಗೆ ನೀರು ನದಿಪಾತ್ರಕ್ಕೆ ಹರಿಸಲಾಗುವುದು.

ಎಚ್ಚರಿಕೆ: ಮಾರ್ಕಂಡೇಯ ನದಿ ದಡದಲ್ಲಿ ಬರುವ ಎಲ್ಲ ಗ್ರಾಮಗಳ ಗ್ರಾಮಸ್ಥರು ಮತ್ತು ತಮ್ಮ ಜಾನವಾರು ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಂಜನಿಯರ್‌ಗಳು ಎಚ್ಚರಿಕೆ ನೀಡಿದ್ದಾರೆ.

ಹಿಡಕಲ್ ಡ್ಯಾಂ: ಘಟಪ್ರಭಾ ನದಿಗೆ ಅಡ್ಡಲಾಗಿ ಹಿಡಕಲ್ ಬಳಿ ನಿರ್ಮಿಸಿರುವ ರಾಜಾ ಲಖಮಗೌಡ ಜಲಾಶಯದ ನೀರಿನ ಮಟ್ಟ ಗುರುವಾರ 2169.933 ಅಡಿ ( 2175 ಅಡಿ ಗರಿಷ್ಟ) ಇತ್ತು. ಅಂದರೆ 51 ಟಿಎಂಸಿ ಪೈಕಿ ಗುರುವಾರ 47.036 ಟಿಎಂಸಿ ಇತ್ತು.
ನದಿಯ ಒಳಹರಿವು ಗುರುವಾರ 15,782 ಕ್ಯೂಸೆಕ್ ಇದ್ದು, ಜಿ.ಆರ್.ಬಿ.ಸಿ. 2200 ಕ್ಯೂಸೆಕ್, ಸಿಬಿಸಿ 400 ಕ್ಯೂಸೆಕ್, ಕೆಪಿಸಿ 2950 ಕ್ಯೂಸೆಕ್, ಇತರೆ ಉದ್ಧೇಶಕ್ಕೆ ಸೇರಿ ಒಟ್ಟು ಹೊರಹರಿವು 9991 ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ಎಇಇ ಜಗದೀಶ್ ಬಿ.ಕೆ.ತಿಳಿಸಿದರು.

ಒಳಹರಿವು ಹೆಚ್ಚಾದಂತೆ ನದಿ ಪಾತ್ರಕ್ಕೆ ಹೆಚ್ಚು ನೀರು ಹರಿಸುವದರಿಂದ ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿ ತಟದ ಜನರು ಜಾನವಾರು ಸಮೇತ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ವಿನಂತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.