ADVERTISEMENT

ರಸ್ತೆ ಅಪಘಾತ: ಸಮಯಪ್ರಜ್ಞೆ ಮೆರೆದ ಅಗ್ನಿಶಾಮಕ ದಳ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 14:47 IST
Last Updated 6 ಜೂನ್ 2025, 14:47 IST

ಸವದತ್ತಿ: ಇಲ್ಲಿನ ಯಲ್ಲಮ್ಮ ದೇವಸ್ಥಾನ ಮಾರ್ಗದ ಮೊರಾರ್ಜಿ ವಸತಿ ಶಾಲೆಯ ಹತ್ತಿರ ಗುರುವಾರ ಬೈಕ್‌ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಸವಾರನ ತಲೆಗೆ ಭಾರೀ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ತಡರಾತ್ರಿಯಾದ ಕಾರಣ ಯಾರ ಸಹಾಯ ಸಿಗದೇ ವ್ಯಕ್ತಿಯು ಪ್ರಜ್ಞೆ ತಪ್ಪಿದ್ದನು. ಇನ್ನೋರ್ವ ಸವಾರ ಅಲ್ಪಗಾಯಗೊಂಡಿದ್ದರು.

ಪಟ್ಟಣದ ಹನಮಗೇರಿ ಓಣಿಯ ಹನಮಂತ ಮುದಕಪ್ಪ ಹಡಪದ ಯಲ್ಲಮ್ಮ ದೇವಸ್ಥಾನದ ಕಡೆಯಿಂದ ಸವದತ್ತಿಗೆ ಮರಳುವಾಗ ಈ ಘಟನೆ ನಡೆದಿದೆ.

ಸಮೀಪದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ಸಮಯಪ್ರಜ್ಞೆಯಿಂದ ಬೇರೆ ವಾಹನಗಳ ದಾರಿ ಕಾಯದೇ ಜೀವನ-ಮರಣದೊಂದಿಗೆ ಹೋರಾಡುತ್ತಿದ್ದ ಈ ವ್ಯಕ್ತಿಯನ್ನು ಬದುಕಿಸಲು ತುರ್ತಾಗಿ ಅಗ್ನಿಶಾಮಕದ ಜಲವಾಹನದಲ್ಲಿ ತಾಲ್ಲೂಕು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೀಗ ಕೀಮ್ಸನಲ್ಲಿ ಚಿಕಿತ್ಸೆಗೆ ಸ್ಪಂದಿಸಿ ಅಪಘಾತಕ್ಕೀಡಾಗಿದ್ದ ವ್ಯಕ್ತಿ ಚೇತರಿಸಿಕೊಂಡಿದ್ದಾರೆ. ಆತನ ಕುಟುಂಬ ಹಾಗೂ ಸಾರ್ವಜನಿಕರು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.