ಖಾನಾಪುರ (ಬೆಳಗಾವಿ ಜಿಲ್ಲೆ): ಭತ್ತದ ನಾಟಿಗಾಗಿ ಗದ್ದೆಯನ್ನು ಸಿದ್ಧಗೊಳಿಸುವ ಸಂದರ್ಭದಲ್ಲಿ ರೋಟವೇಟರ್ ಮಗುಚಿ ಬಿದ್ದಿದ್ದರಿಂದ ಚಾಲಕ ಅದರಡಿ ಸಿಲುಕಿ ಮೃತರಾದ ಘಟನೆ ಖಾನಾಪುರ ತಾಲ್ಲೂಕಿನ ಬೇಕವಾಡ ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಮೃತರನ್ನು ಹಾವೇರಿ ಜಿಲ್ಲೆಯ ವೃಷಭ ಯರನಾಳ (22) ಎಂದು ಗುರುತಿಸಲಾಗಿದೆ.
ರೋಟಾವೇಟರ್ ಅಡಿ ಸಿಲುಕಿದ್ದ ಚಾಲಕನ ಮೃತದೇಹವನ್ನು ಸ್ಥಳೀಯರು ಜೆಸಿಬಿ ಬಳಸಿ ಹೊರತೆಗೆದರು.
ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.