ADVERTISEMENT

‘ವಿಶ್ವ ಸುರಕ್ಷಿತ ತಾಯ್ತನ ದಿನ’ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 11:10 IST
Last Updated 11 ಏಪ್ರಿಲ್ 2019, 11:10 IST
ಬೆಳಗಾವಿಯಲ್ಲಿ ಗುರುವಾರ ನಡೆದ ‘ವಿಶ್ವ ಸುರಕ್ಷಿತ ತಾಯ್ತನ ದಿನ’ ಆಚರಣೆ ಕಾರ್ಯಕ್ರಮವನ್ನು ಎಫ್‌ಪಿಎಐ ಶಾಖೆಯ ಉಪಾಧ್ಯಕ್ಷೆ ಶೋಭಾ ಎಸ್. ಕುಲಕರ್ಣಿ ಉದ್ಘಾಟಿಸಿದರು
ಬೆಳಗಾವಿಯಲ್ಲಿ ಗುರುವಾರ ನಡೆದ ‘ವಿಶ್ವ ಸುರಕ್ಷಿತ ತಾಯ್ತನ ದಿನ’ ಆಚರಣೆ ಕಾರ್ಯಕ್ರಮವನ್ನು ಎಫ್‌ಪಿಎಐ ಶಾಖೆಯ ಉಪಾಧ್ಯಕ್ಷೆ ಶೋಭಾ ಎಸ್. ಕುಲಕರ್ಣಿ ಉದ್ಘಾಟಿಸಿದರು   

ಬೆಳಗಾವಿ: ಭಾರತೀಯ ಕುಟುಂಬ ಯೋಜನಾ ಸಂಘ (ಎಫ್‌ಪಿಎಐ) ಬೆಳಗಾವಿ ಶಾಖೆಯಿಂದ ಗುರುವಾರ ‘ವಿಶ್ವ ಸುರಕ್ಷಿತ ತಾಯ್ತನ ದಿನ’ ಆಚರಿಸಲಾಯಿತು.

ಉದ್ಘಾಟಿದ ಶಾಖೆಯ ಉಪಾಧ್ಯಕ್ಷೆ ಶೋಭಾ ಎಸ್. ಕುಲಕರ್ಣಿ ಮಾತನಾಡಿ, ‘ದೇಶದಾದ್ಯಂತ ವಿಶ್ವ ಸುರಕ್ಷಿತ ತಾಯ್ತನ ದಿನ ಆಚರಿಸುವುದು ಹೆಮ್ಮೆಯ ವಿಷಯ. ಈ ಕುರಿತು ಜನರಲ್ಲಿ ಅರಿವು ಕಡಿಮೆ ಇದೆ’ ಎಂದರು.

‘ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವುದರಿಂದ ಹಲವು ದುಷ್ಪರಿಣಾಮಗಳು ಉಂಟಾಗುತ್ತವೆ’ ಎಂದು ತಿಳಿಸಿದರು.

ADVERTISEMENT

ಸಂಪನ್ಮೂಲ ವ್ಯಕ್ತಿಯಾಗಿದ್ದ ಸ್ತ್ರೀರೋಗ ತಜ್ಞೆ ಡಾ.ವೈಶಾಲಿ ಕಿತ್ತೂರು, ‘ಕುಟುಂಬ ಬೆಳೆಸುವುದು ತಾಯಿಯ ಜವಾಬ್ದಾರಿ. ಹೀಗಾಗಿ, ಹೆಣ್ಣು ಮಕ್ಕಳು ಸದೃಢವಾಗಿರಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು’ ಎಂದು ಹೇಳಿದರು.

ಎಫ್‌ಪಿಎಐ ಬೆಳಗಾವಿ ಶಾಖೆಯ ವೈದ್ಯಾಧಿಕಾರಿಗಳಾದ ಡಾ.ಆರತಿ ಎ. ಕುಲಕರ್ಣಿ, ಡಾ.ನಮ್ರತಾ ಮಿಸಾಳೆ ಮಾತನಾಡಿದರು.

ಕಾರ್ಯಕ್ರಮಾಧಿಕಾರಿ ಕೃಷ್ಣ ಗುಮಾಸ್ತೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.