ADVERTISEMENT

ಡಾ.ಸಿದ್ದುಗೆ ‘ಸಮಾಜಸೇವಾ ರತ್ನ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 14:15 IST
Last Updated 17 ನವೆಂಬರ್ 2021, 14:15 IST
ಮುಗಳಖೋಡದಲ್ಲಿ ಜಮಖಂಡಿ ಉಪ ವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳಿ ಅವರಿಗೆ ಮುನಿಗಳು ‘ಸಮಾಜ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು
ಮುಗಳಖೋಡದಲ್ಲಿ ಜಮಖಂಡಿ ಉಪ ವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳಿ ಅವರಿಗೆ ಮುನಿಗಳು ‘ಸಮಾಜ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು   

ಮುಗಳಖೋಡ: ಇಲ್ಲಿನವರೇ ಆಗಿರುವ, ಹಾಲಿ ಜಮಖಂಡಿ ಉಪ ವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳಿ ಅವರಿಗೆ ಇಲ್ಲಿ ಈಚೆಗೆ ನಡೆದ ದಶಲಕ್ಷಣ ಸಮಾರಂಭದಲ್ಲಿ ಸಮಸ್ತ ಜೈನ ಸಮಾಜದವರು ‘ಸಮಾಜ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಸಿದ್ದು, ‘ಸುಶಿಕ್ಷಿತ ಸಮಾಜ ನಿರ್ಮಾಣ ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸಾಧ್ಯ. ಆದ್ದರಿಂದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಧರ್ಮಾಚರಣೆಯ ಬಗ್ಗೆಯೂ ತಿಳಿಸಿಕೊಡಬೇಕು’ ಎಂದು ಸಲಹೆ ನೀಡಿದರು.

ಪಾರ್ಶ್ವಸೇನ ಮುನಿ ಮಹಾರಾಜ, ಶಾಂತಿಸೇನ ಮುನಿ ಮಹಾರಾಜ, ಅಜಿತಮತಿ ಮಾತಾಜಿ, ಸುಮತಿಮತಿ ಮಾತಾಜಿ, ಸುವರ್ಣಮತಿ ಮಾತಾಜಿ, ಮಲ್ಲಿಸೇನ ಮಹಾರಾಜ, ಭರತೇಶ ಉಪಾಧ್ಯೆ, ಕುಲಭೂಷಣ ಉಪಾಧ್ಯೆ, ಮಹೇಂದ್ರ ಉಪಾಧ್ಯೆ, ಧನಪಾಲ ಉಪಾಧ್ಯೆ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.