ರಾಯಬಾಗ: ‘ದೇಶಕ್ಕಾಗಿ ತನ್ನ ಬದುಕನ್ನೇ ತ್ಯಾಗ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ’ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಅಭಾಜೀ ವೃತ್ತದ ಬಳಿ ನಡೆದ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ರಾಯಣ್ಣ ಧೈರ್ಯ, ಸಾಹಸದ ಮೂಲಕ ಬ್ರಿಟಿಷರ ಎದೆ ನಡುಗಿಸಿದ್ದ ವೀರ. ಕಿತ್ತೂರು ರಾಣಿ ಚನ್ನಮ್ಮರ ಬೆನ್ನೆಲುಬಾಗಿ ತಾಯ್ನಾಡಿಗಾಗಿ ಪ್ರಾಣತೆತ್ತ ದೇಶಭಕ್ತ’ ಎಂದರು.
ತಹಶೀಲ್ದಾರ್ ಸುರೇಶ ಮುಂಜೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ ಅಂಗಡಿ, ಉಪ ತಹಶೀಲ್ದಾರ್ ಪರಮಾನಂದ ಮಂಗಸೂಳಿ, ಸಿಪಿಐ ಬಿ.ಎಸ್.ಮಂಟೂರ, ಅರುಣ ಮಾಚಕನೂರ, ಬಸವರಾಜಪ್ಪ ಆರ್ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.