ಮುನವಳ್ಳಿ: ಕಟಕೋಳ ಗ್ರಾಮದ ನಾಮದೇವ ಶಿಂಪಿ ಸಮಾಜ ವತಿಯಿಂದ ನಾಮದೇವ ಮಹಾರಾಜರ ಸಂಜೀವನ ಸಮಾಧಿ ಮಹೋತ್ಸವ ಸೋಹಳಾ ಆಗಸ್ಟ್ 1 ಮತ್ತು 2 ರಂದು ನಡೆಯಲಿದೆ.
ಅ.1ರಂದು ಬೆಳಿಗ್ಗೆ 10 ಗಂಟೆಗೆ ಸತೀಶರಾವ ಗೋಪಾಲರಾವ ರೇಣಕೆ ಅವರಿಂದ ಪೋತಿ ಸ್ಥಾಪನೆ, ಕಿರ್ತನೆ ಜಾಗರಣೆ ಜರುಗುವುದು. 2ರಂದು ಕಾಕಡಾರತಿ, ಪ್ರವಚನ, ಗುಲಾಲ ಕೀರ್ತನೆ, ವಡಗಾಂವದ ಬಾಪಸೋ ಬಾಳಾಕೃಷ್ಣ ಶ್ರೀ, ಸತೀಶರಾವ ಗೋಪಾಲರಾವ ರೇಣಕೆ, ಅರುಣ ಪಾಂಡುರಂಗ ಜ್ಯೋಶಿ ಸಾನ್ನಿಧ್ಯದಲ್ಲಿ ಸಮಾರಂಭ ಜರುಗಲಿದೆ. ಮಧ್ಯಾಹ್ನ ಪ್ರಸಾದದ ನಂತರ ದಿಂಡಿ ಸೋಹಳಾ ಹಾಗೂ ರಾತ್ರಿ 9 ಗಂಟೆಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.