ADVERTISEMENT

ಬಾಳೆ ಹಣ್ಣು ಕುಸ್ತಿಯಲ್ಲಿ ಗೆದ್ದವರೆ ಹೆಚ್ಚು: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 4:39 IST
Last Updated 10 ಮಾರ್ಚ್ 2024, 4:39 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಮೊದಲ ಬಾರಿ ಚುನಾವಣೆಯಲ್ಲಿ ಗೆದ್ದವರು, ಎರಡನೇ ಬಾರಿ ಗೆಲ್ಲುವುದಿಲ್ಲ. ಇದಕ್ಕೆ ಶಾಸಕರ ಜೊತೆ ಓಡಾಡುವವರೇ ಕಾರಣ’ ಎಂದು ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು. 

ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು, ‘ಮೊದಲಿದ್ದ ಶಾಸಕರು ಜನರಿಗೆ ಬೇಸರವಾಗುತ್ತಾರೆ. ಹೀಗಾಗಿ ಅವರು ಬದಲು ಮತ್ತೊಬ್ಬರನ್ನು ಆಯ್ಕೆ ಮಾಡುತ್ತಾರೆ. ಆದರೆ, ಎರಡನೇ ಬಾರಿ ಆಯ್ಕೆಯಾದರೆ ಅದು ನಿಜವಾದ ಗೆಲುವು. ಮೊದಲನೆಯದು ಬಾಳೇಹಣ್ಣಿನ ಕುಸ್ತಿ ಇದ್ದಂತೆ. ಎರಡನೇ ಬಾರಿ ಗೆದ್ದರೆ ಅದು ದೊಡ್ಡ ಗೆಲುವು’ ಎಂದರು.

‘ಗೆದ್ದ ಶಾಸಕರನ್ನು ಎರಡನೇ ಬಾರಿ ಗೆಲ್ಲಿಸುವ ಹೊಣೆಗಾರಿಕೆ ಬೆಂಬಲಿಗರ ಮೇಲೆ ಹೆಚ್ಚು ಇರುತ್ತದೆ. ಆದರೆ, ಜನರೊಂದಿಗೆ ಅವರ ವರ್ತನೆ ಸರಿಯಾಗಿರಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.