ADVERTISEMENT

ಶಾಲೆ ಚಾವಣಿ ಕುಸಿತ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 6:32 IST
Last Updated 13 ಸೆಪ್ಟೆಂಬರ್ 2022, 6:32 IST
ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಚಾವಣಿ ಭಾನುವಾರ ರಾತ್ರಿ ಕುಸಿದುಬಿದ್ದಿದೆ
ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಚಾವಣಿ ಭಾನುವಾರ ರಾತ್ರಿ ಕುಸಿದುಬಿದ್ದಿದೆ   

ನಾಗರಮುನ್ನೋಳಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ಚಾವಣಿ ಭಾನುವಾರ ರಾತ್ರಿ ಕುಸಿದು ಬಿದ್ದಿದೆ.

ಈ ಶಾಲೆಗೆ ಕೆಂಪುಹೆಂಚಿನ ಚಾವಣಿ ಇದೆ. ನಿರಂತರ ಮಳೆಯ ಕಾರಣ ರಾತ್ರಿ ಕುಸಿದುಬಿದ್ದಿದೆ. ಶಾಲೆಯಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಸೋಮವಾರ ಎಂದಿನಂತೆ ಶಾಲೆಗಳನ್ನು ನಡೆಸಲು ಉದ್ದೇಶಿಸಲಾಗಿತ್ತು. ಮಕ್ಕಳು ಶಾಲೆಯಲ್ಲಿ ಇದ್ದಾಗ ಚಾವಣಿ ಕುಸಿದಿದ್ದರೆ ಅಪಾಯ ಸಂಭವಿಸುತ್ತಿತ್ತು ಎಂದು ಮಲ್ಲಪ್ಪ ಟೋಣಪೆ, ಉಮೇಶ ಪಾಟೀಲ, ರಾಜು ಚೌಹಾಣ ಆತಂಕ ವ್ಯಕ್ತಪಡಿಸಿದ್ದಾರೆ.‌

ಶಾಲೆಯಲ್ಲಿ 600ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಈಗ ಚಾವಣಿ ಕುಸಿದ ಕೊಠಡಿಗಳಲ್ಲಿ 120 ಮಕ್ಕಳು ದಿನವೂ ಪಾಠ ಕೇಳುತ್ತಿದ್ದರು. ಆತಂಕ ಇರುವ ಕೊಠಡಿಗಳನ್ನು ಖಾಲಿ ಮಾಡಿದ್ದು, ಮಕ್ಕಳಿಗೆ ಬೇರೆ ಕೊಠಡಿಗಳಲ್ಲಿ ಪಾಠ ಮಾಡಲಾಗುತ್ತಿದೆ ಎಂದು ಮುಖ್ಯ ಶಿಕ್ಷಕ ವೈ.ಎಸ್.ಬುಡಗೋಳ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.