ADVERTISEMENT

ಶಾಲೆಗಳು ಶತಮಾನ ಕಾಣಲಿ; ಜೈಲುಗಳಲ್ಲ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 2:26 IST
Last Updated 23 ಡಿಸೆಂಬರ್ 2025, 2:26 IST
ಬೆಳಗಾವಿಯ ಬಿ.ಕೆ. ಮಾಡೆಲ್ ಹೈಸ್ಕೂಲ್ ಶತಮಾನೋತ್ಸವ ಸಮಾರಂಭದಲ್ಲಿ ಗಂಗಾವತಿ ಪ್ರಾಣೇಶ ಹಾಗೂ ಬಸವರಾಜ ಮಾಮನಿ ಅವರನ್ನು ಸನ್ಮಾನಿಸಲಾಯಿತು 
ಬೆಳಗಾವಿಯ ಬಿ.ಕೆ. ಮಾಡೆಲ್ ಹೈಸ್ಕೂಲ್ ಶತಮಾನೋತ್ಸವ ಸಮಾರಂಭದಲ್ಲಿ ಗಂಗಾವತಿ ಪ್ರಾಣೇಶ ಹಾಗೂ ಬಸವರಾಜ ಮಾಮನಿ ಅವರನ್ನು ಸನ್ಮಾನಿಸಲಾಯಿತು    

ಬೆಳಗಾವಿ: ‘ಒಂದು ಶಾಲೆ ನೂರು ವರ್ಷ ನಡೆದುಕೊಂಡು ಬರಲು ಸಾಧ್ಯವಾಗುವುದು ಅಲ್ಲಿಯ ಶೈಕ್ಷಣಿಕ ಮಟ್ಟದಿಂದ ಮಾತ್ರ. ಇದು ಸಂಸ್ಕೃತಿಯ ಉಳಿವಿನ ಸಂಕೇತ. ಆದರೆ, ನಮ್ಮಲ್ಲಿ ಈಗ ‍ಪೊಲೀಸ್ ಸ್ಟೇಷನ್‌, ಜೈಲುಗಳು ಶತಮಾನೋತ್ಸವ ಆಚರಿಸಿಕೊಳ್ಳುತ್ತಿವೆ. ಇದು ಸಂಸ್ಕೃತಿಯ ಅಧಃಪತನದ ಸಂಕೇತ’ ಎಂದು ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್‌ ಹೇಳಿದರು.

ಬೆಳಗಾವಿ ಎಜುಕೇಶನ್ ಸೊಸೈಟಿಯ ಬಿ.ಕೆ. ಮಾಡೆಲ್ ಹೈಸ್ಕೂಲ್ ಶತಮಾನೋತ್ಸವ ಸಮಾರಂಭದ ಅಂಗವಾಗಿ ಈಚೆಗೆ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೆಳಗಾವಿ ಎಜುಕೇಶನ್ ಸೊಸೈಟಿಯ ಬಿ.ಕೆ. ಮಾಡೆಲ್ ಹೈಸ್ಕೂಲ್ ಶಿಕ್ಷಣ ಸಂಸ್ಥೆಯು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಅಪರೂಪದ ಕಾರ್ಯಕ್ರಮ’ ಎಂದರು.

ADVERTISEMENT

ಹಾಸ್ಯ ಭಾಷಣಕಾರ ಬಸವರಾಜ ಮಹಾಮನಿ, ಲೇಖಕ ಗುಂಡೇನಟ್ಟಿ ಮಧುಕರ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಅವಿನಾಶ ಪೋತದಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀನಿವಾಸ ಶಿವಣಗಿ ಸಂಸ್ಥೆಯು ನಡೆದ ಬಂದ ದಾರಿ ವಿವರಿಸಿದರು. ಅರವಿಂದ ಹುನಗುಂದ ನಿರೂಪಿಸಿದರು. ಸುಧೀರ ಕುಲಕರ್ಣಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.