ADVERTISEMENT

ಮಹಿಳೆಯರಿಗೆ ಆತ್ಮಬಲ ಅಗತ್ಯ: ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್‌

ಮಹಿಳೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 14:41 IST
Last Updated 9 ಜನವರಿ 2020, 14:41 IST
ಅಥಣಿಯ ಮೋಟಗಿ ಮಠದಲ್ಲಿ ವಿವಿಧ ಕ್ಷೇತ್ರದ ಸಾಧಕಿಯರಿಗೆ ‘ಮುಕ್ತಾಯಿ ಮಹಿಳಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು
ಅಥಣಿಯ ಮೋಟಗಿ ಮಠದಲ್ಲಿ ವಿವಿಧ ಕ್ಷೇತ್ರದ ಸಾಧಕಿಯರಿಗೆ ‘ಮುಕ್ತಾಯಿ ಮಹಿಳಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು   

ಅಥಣಿ: ‘ಮಹಿಳೆಯರ ಮುಂದೆ ಸಾಕಷ್ಟು ಸವಾಲುಗಳಿವೆ. ಅವುಗಳಿಗೆ ನಾವೇ ಉತ್ತರ ನೀಡಬೇಕಾಗಿದೆ. ಇದಕ್ಕೆ ಆತ್ಮಬಲ ಅತ್ಯಗತ್ಯವಾಗಿದೆ’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್‌ ಹೇಳಿದರು.

ಇಲ್ಲಿನ ಮೋಟಗಿ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಉತ್ಸವದ ನಡೆದ ಮುಕ್ತಾಯಿ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಆಧುನಿಕತೆ ಬೆಳೆಯುತಿದ್ದಂತೆಯೇ ಶ್ರೀಮಂತಿಕೆ, ವೈಭವೀಕರಣದ ಬೆನ್ನು ಹತ್ತಿದ ವಿದ್ಯಾವಂತರು ಜೀವನವನ್ನು ಕೇವಲ ಹಣದಿಂದ ಅಳೆಯುತ್ತಿದ್ದೇವೆ. ಮಾನವೀಯ ಮೌಲ್ಯಗಳನ್ನು ಕಡೆಗಣಿಸುತ್ತಿದ್ದೇವೆ. ಇದು ಬದುಕಿನ ಸರಿಯಾದ ಕ್ರಮವಲ್ಲ’ ಎಂದರು.

ADVERTISEMENT

‘ಬೆಳಗಾವಿ ಅಷ್ಟೇ ಅಲ್ಲ, ಕರ್ನಾಟಕದ ಯಾವುದೇ ಪ್ರದೇಶದ ಒಂದಿಂಚನ್ನೂ ಮಹಾರಾಷ್ಟ್ರದವರು ಪಡೆಯುವುದಕ್ಕೆ ಆಗುವುದಿಲ್ಲ. ಕನ್ನಡಿಗರು ಯಾವಾಗಲೂ ಒಗ್ಗಟ್ಟನ್ನು ಬಿಟ್ಟವರಲ್ಲ’ ಎಂದು ಹೇಳಿದರು.

ಇಳಕಲ್ಲದ ಗುರುಮಹಾಂತ ಸ್ವಾಮೀಜಿ, ಅಗಡಿಯ ಅಕ್ಕಿಮಠ ಗುರುಲಿಂಗ ಸ್ವಾಮೀಜಿ, ಚಿಂತಕಿ ಡಾ.ಮೀನಾಕ್ಷಿ ಬಾಳಿ ಮಾತನಾಡಿದರು.

ಮೋಟಗಿ ಮಠದ ಅಧ್ಯಕ್ಷ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈ ಮಹಿಳೆಯರಿಗೆ ಮುಕ್ತಾಯಿ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಸವ ಕಲ್ಯಾಣದ ಬಸವ ತತ್ವ ಪ್ರಸಾರಕಿ ಅಕ್ಕ ಗಂಗಾಬಿಕಾ, ಸುಮಿತ್ರಾ ಕುಮಠಳ್ಳಿ, ಸಿ.ಸಿ. ಹೇಮಲತಾ, ವಿದ್ಯಾ ಭಜಂತ್ರಿ, ಕೃತಿಕಾ ಜಂಗಿಮಠ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.