ಬೆಳಗಾವಿ ತಾಲ್ಲೂಕಿನ ಶಿಂಧೊಳ್ಳಿ ಗ್ರಾಮದಲ್ಲಿ 15 ವರ್ಷಗಳ ಬಳಿಕ ಭಂಡಾರದ ಸಡಗರ ಆರಂಭವಾಗಿದೆ. ಗ್ರಾಮದೇವತೆ ಮಹಾಲಕ್ಷ್ಮಿ ಜಾತ್ರೆಗೆ ಈ ವರ್ಷ ಮುಹೂರ್ತ ಬಂದಿದ್ದರಿಂದ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ಬುಧವಾರ ನಡೆದ ಮಹಾಲಕ್ಷ್ಮಿ ರಥೋತ್ಸವಕ್ಕೆ ಜಿಲ್ಲೆಯ ಮೂಲೆಮೂಲೆಯಿಂದ ಅಪಾರ ಸಂಖ್ಯೆಯ ಭಕ್ತರು ಸೇರಿದ್ದರು. ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯಗಳ ಜನರೂ ಒಂದಾಗಿ ಆಚರಿಸುವುದು ಈ ಜಾತ್ರೆಯ ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.