ADVERTISEMENT

ಶಿವಬಸವ ಸ್ವಾಮೀಜಿ ಜಯಂತಿ 7ರಿಂದ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 6:13 IST
Last Updated 4 ಡಿಸೆಂಬರ್ 2020, 6:13 IST
ಶಿವಬಸವ ಸ್ವಾಮೀಜಿ
ಶಿವಬಸವ ಸ್ವಾಮೀಜಿ   

ಬೆಳಗಾವಿ: ನಾಗನೂರು ರುದ್ರಾಕ್ಷಿ ಮಠದಿಂದ ಇಲ್ಲಿನ ಶಿವಬಸವ ನಗರದ ಎಸ್‌ಜಿಬಿಐಟಿಯಲ್ಲಿ ಡಾ.ಶಿವಬಸವ ಸ್ವಾಮೀಜಿ ಅವರ 131ನೇ ಜಯಂತಿ ಮಹೋತ್ಸವ, ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ನೂತನ ಕಾರ್ಯಾಲಯದ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಡಿ.7 ಹಾಗೂ 8ರಂದು ಹಮ್ಮಿಕೊಳ್ಳಲಾಗಿದೆ.

ಗದಗ–ಡಂಬಳ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಡಿ. 7ರಂದು ಬೆಳಿಗ್ಗೆ 9.30ಕ್ಕೆ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಲಾಗುವುದು.

ADVERTISEMENT

ಸಂಜೆ 6ಕ್ಕೆ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಆನಂದಪುರಂ–ಶಿವಮೊಗ್ಗ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ವಿಜಯಪುರ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಉದ್ಘಾಟಿಸುವರು. ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಮತ್ತು ಆಯುಕ್ತ ಪ್ರೀತಂ ನಸಲಾಪುರೆ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಗಳಿಸಿದ ಯಮಕನಮರಡಿ ಸರ್ಕಾರಿ ಪಿಯು ಕಾಲೇಜಿನ ಸಿ.ಜಿ. ಮಠಪತಿ ಅವರನ್ನು ಸನ್ಮಾನಿಸಲಾಗುವುದು.

ಸ.ರಾ. ಸುಳಕೊಡೆ ವಿರಚಿತ ‘ಸಾದ್ಯಂತ ನಡೆ–ನುಡಿಗಳು’, ಮಹಾಂತ ದೇವರು ಸಂಪಾದಿಸಿದ ‘ಶಿವಬಸವ ಚಿತ್ರಸಂಪುಟ’ ಹಾಗೂ ಉಜ್ವಲಾ ಎಸ್. ಹಿರೇಮಠ ಅವರು ಅಲ್ಲಮಪ್ರಭು ಬಗ್ಗೆ ಬರೆದಿರುವ ಇಂಗ್ಲಿಷ್ ಪುಸ್ತಕ ಬಿಡುಗಡೆ ಮಾಡಲಾಗುವುದು. 8ರಂದು ಬೆಳಿಗ್ಗೆ 10.30ಕ್ಕೆ ಸ್ವರ ನಮನ ಕಾರ್ಯಕ್ರಮವಿದೆ. ಮಧ್ಯಾಹ್ನ 1ಕ್ಕೆ ಮಹಾಪ್ರಸಾದ ಇರುತ್ತದೆ ಎಂದು ಜಯಂತಿ ಮಹೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.