ADVERTISEMENT

ರಾಮಕೃಷ್ಣ ಆಶ್ರಮ ವಾರ್ಷಿಕೋತ್ಸವ 7ರಿಂದ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 11:37 IST
Last Updated 5 ಫೆಬ್ರುವರಿ 2020, 11:37 IST
ಬೆಳಗಾವಿಯ ರಾಮಕೃಷ್ಣ ಆಶ್ರಮದ ನೋಟ
ಬೆಳಗಾವಿಯ ರಾಮಕೃಷ್ಣ ಆಶ್ರಮದ ನೋಟ   

ಬೆಳಗಾವಿ: ‘ಇಲ್ಲಿನ ಕೋಟೆಯಲ್ಲಿರುವ ರಾಮಕೃಷ್ಣ ಆಶ್ರಮದ 16ನೇ ವಾರ್ಷಿಕೋತ್ಸವ ಅಂಗವಾಗಿ ಫೆ. 7ರಿಂದ 9ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದುಆಶ್ರಮದ ಕಾರ್ಯದರ್ಶಿಸ್ವಾಮಿ ಆತ್ಮಪ್ರಾಣಾನಂದ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾಮಿ ವಿವೇಕಾನಂದ ಅವರು ದೇಶ ಪರ್ಯಟನೆ ಮಾಡುತ್ತಾ 1892ರ ಅಕ್ಟೋಬರ್‌ನಲ್ಲಿ ಬೆಳಗಾವಿಗೆ ಬಂದಿದ್ದರು. ಮೊದಲ 3 ದಿನ ಸದಾಶಿವ ಭಾಟೆ ಅವರ ಮನೆಯಲ್ಲಿ, ಬಳಿಕ 9 ದಿನ ಕೋಟೆಯಲ್ಲಿ ಹರಿಪಾದ ಮಿತ್ರ ಎಂಬ ಅರಣ್ಯ ಅಧಿಕಾರಿಗಳ ಬಂಗಲೆಯಲ್ಲಿ ತಂಗಿದ್ದರು. ಅವರು ಭೇಟಿ ನೀಡಿ ಪಾವನಗೊಳಿಸಿದ ಭೂಮಿಯಲ್ಲಿ 2000ರಲ್ಲಿ ರಾಮಕೃಷ್ಣ ಆಶ್ರಮ ಪ್ರಾರಂಭಿಸಲಾಯಿತು. 2004ರಲ್ಲಿ ಭಾವೈಕ್ಯ ಮಂದಿರ ನಿರ್ಮಿಸಲಾಯಿತು. ಅದರ ಸವಿನೆನಪಿಗಾಗಿ ಪ್ರತಿ ವರ್ಷ ವಾರ್ಷಿಕೋತ್ಸವ ನಡೆಸಲಾಗುತ್ತಿದೆ’ ಎಂದರು.

‘7ರಂದು 10.30ರಿಂದ ಮಧ್ಯಾಹ್ನ 1.30ರವರೆಗೆ ‘ನಿನ್ನ ಏಳಿಗೆಗೆ ನೀನೇ ಶಿಲ್ಪಿ’ ಧ್ಯೇಯವಾಕ್ಯದೊಂದಿಗೆ ಯುವ ಸಮ್ಮೇಳನ, 8ರಂದು ‘ಸಮರ್ಥ ಶಿಕ್ಷಕ–ರಾಷ್ಟ್ರ ರಕ್ಷಕ’ ಶೀರ್ಷಿಕೆಯಲ್ಲಿ ಶಿಕ್ಷಕರ ಸಮ್ಮೇಳನ, ಸಂಜೆ 5ಕ್ಕೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. 9ರಂದು ‘ವಿಕಾಸವೇ ಜೀವನ, ಸಂಕುಚಿತವೇ ಮರಣ’ ಧ್ಯೇಯವಾಕ್ಯದೊಂದಿಗೆ ಭಕ್ತ ಸಮ್ಮೇಳನ, ಸಂಜೆ 6.30ರಿಂದ 8.30ರವರೆ ಶಾಂತಲಾ ನಾಟ್ಯಾನಾಲಯ ಅವರಿಂದ ‘ಶ್ರೀರಾಮಕೃಷ್ಣ ಚರಿತಂ’ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ವಿವೇಕಾನಂದ ಅವರ ಚಿಂತನೆಯನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆಸ’ ಎಂದು ಮಾಹಿತಿ ನೀಡಿದರು.

ADVERTISEMENT

‘ತಿರುಪತಿಯ ರಾಮಕೃಷ್ಣ ಮಿಶನ್ ಆಶ್ರಮದ ಕಾರ್ಯದರ್ಶಿ ಅನುಪಮಾನಂದಜಿ, ಕೋಲ್ಕತ್ತಾದ ಬೇಲೂರು ಮಠದ ಸ್ವಾಮಿ ಕರುಣಾಕರಾನಂದ, ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ. ಅನಂತರಾಮು ಉಪನ್ಯಾಸ ನೀಡಲಿದ್ದಾರೆ’ ಎಂದು ತಿಳಿಸಿದರು.ಸ್ವಾಮಿ ಮೋಕ್ಷಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.