ADVERTISEMENT

ಎಸ್.ಎಲ್.ಕುಲಕರ್ಣಿ ಸಾಂಸ್ಕೃತಿಕ ಲೋಕದ ಶಕ್ತಿ- ವಕೀಲ ಎಸ್.ಎಂ.ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 13:37 IST
Last Updated 22 ಜನವರಿ 2022, 13:37 IST
ಬೆಳಗಾವಿಯಲ್ಲಿ ಸಾಹಿತಿ ಡಾ.ಎಸ್.ಎಲ್. ಕುಲಕರ್ಣಿ ಅಭಿನಂದನಾ ಗ್ರಂಥ ‘ಶ್ರೀನಿಧಿ’ಯನ್ನು ಗಣ್ಯರು ಶುಕ್ರವಾರ ಬಿಡುಗಡೆ ಮಾಡಿದರು
ಬೆಳಗಾವಿಯಲ್ಲಿ ಸಾಹಿತಿ ಡಾ.ಎಸ್.ಎಲ್. ಕುಲಕರ್ಣಿ ಅಭಿನಂದನಾ ಗ್ರಂಥ ‘ಶ್ರೀನಿಧಿ’ಯನ್ನು ಗಣ್ಯರು ಶುಕ್ರವಾರ ಬಿಡುಗಡೆ ಮಾಡಿದರು   

ಬೆಳಗಾವಿ: ‘ಸಾಹಿತಿ ಡಾ.ಎಸ್.ಎಲ್. ಕುಲಕರ್ಣಿ ಅವರು ಸಾಂಸ್ಕೃತಿಕ ಲೋಕದ ಶಕ್ತಿ ಇದ್ದಂತೆ’ ಎಂದು ವಕೀಲ ಎಸ್.ಎಂ. ಕುಲಕರ್ಣಿ ಹೇಳಿದರು.

ನಗರದ ಸ್ವಾಮಿನಾಥ ಕಾಲೊನಿಯಲ್ಲಿ ಶುಕ್ರವಾರ ನಡೆದ ಎಸ್.ಎಲ್. ಕುಲಕರ್ಣಿ ಅವರ ಅಭಿನಂದನಾ ಗ್ರಂಥ ‘ಶ್ರೀನಿಧಿ’ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾಹಿತ್ಯವಷ್ಟೇ ಅಲ್ಲದೆ ಶಂಕರ ಜಯಂತಿ, ಅಗಡಿ ಸ್ವಾಮೀಜಿ ಉತ್ಸವ, ಬ್ರಾಹ್ಮಣ ಸಮ್ಮೇಳನ ಹೀಗೆ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸಮಾಜಕ್ಕೆ ಅವರ ಸೇವೆ ಅನುಪಮವಾದುದು’ ಎಂದರು.

ADVERTISEMENT

ಕೃತಿ ಪರಿಚಯಿಸಿದ ಲೇಖಕ ಶಿರೀಷ ಜೋಶಿ, ‘ಕೃತಿಯು ಸಾಹಿತ್ಯ ನಿಧಿ ಹಾಗೂ ವ್ಯಕ್ತಿತ್ವದ ನಿಧಿಯಿಂದ ಕೂಡಿದೆ’ ಎಂದು ತಿಳಿಸಿದರು.

ಗ್ರಂಥದ ಪ್ರಧಾನ ಸಂಪಾದಕ ಡಾ.ಎಸ್.ಬಿ. ಉತ್ನಾಳ ಮಾತನಾಡಿದರು.

ಡಾ.ಎಂ.ಎಲ್. ತುಕ್ಕಾರ, ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಉಷಾ ಶ್ರೀನಿವಾಸ ಕುಲಕರ್ಣಿ, ಅನಂತ ಗೋನಬಾಳ, ಪ್ರೊ.ಶ್ರೀಧರ ಹುಕ್ಕೇರಿ, ಪ್ರೊ.ಟಿ. ವೆಂಕಟೇಶ, ಎನ್.ಡಿ. ದೇಶಪಾಂಡೆ, ರಂಜನಾ ನಾಯಕ, ಜಯಂತ ಜೋಶಿ, ಪ್ರೊ.ಐ.ಎಸ್. ಕುಂಬಾರ, ಜಯಪ್ರಕಾಶ ಜೋಶಿ ಇದ್ದರು.

ನಿರ್ಮಲಾ ಪ್ರಕಾಶ ಪ್ರಾರ್ಥಿಸಿದರು. ನಾರಾಯಣ ಗಣಾಚಾರಿ ಸ್ವಾಗತಿಸಿದರು. ನೀರಜಾ ಗಣಾಚಾರಿ ನಿರೂಪಿಸಿದರು. ಪ್ರತಿಮಾ ರವಿರಾಜ ದೀಕ್ಷಿತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.