ADVERTISEMENT

‘ಸಿರಿಗನ್ನಡ ಪ್ರಶಸ್ತಿ’ ಪ್ರಕಟ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 15:47 IST
Last Updated 26 ಜೂನ್ 2019, 15:47 IST
ಚಂದ್ರಕಾಂತ ಪಾಟೀಲ
ಚಂದ್ರಕಾಂತ ಪಾಟೀಲ   

ಬೆಳಗಾವಿ: ಇಲ್ಲಿನ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ತನ್ನ 13ನೇ ವಾರ್ಷಿಕೋತ್ಸವ ಅಂಗವಾಗಿ ಕೊಡಮಾಡುವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಸಾಹಿತ್ಯ ಪ್ರಶಸ್ತಿಗೆ ಡಾ.ಶಿವಾನಂದ ಮೂಲಿಮನಿ, ವೈ.ಎಂ. ಯಾಕೊಳ್ಳಿ, ಶ್ರೀಕಾಂತ ಶಾನವಾಡ, ಹಮೀದಾ ಬೇಗಂ ದೇಸಾಯಿ, ಪ್ರೊ.ಸಿ.ಜಿ. ಮಠಪತಿ ಹಾಗೂ ಕಲಾವಿದರಾದ ನಯನಾ ಗಿರಿಗೌಡರ, ಪರಶುರಾಮ ವಾಜಂತ್ರಿ, ಆನಂದ ಮುರಕಿಬಾವಿ, ಬೆಳಗಾವಿಯ ಮರಾಠಿ ಚಲನಚಿತ್ರ ನಟಿ ನಿಶಿಗಂಧಾ ಕಾನೂರಕರ ಅವರನ್ನು ಆಯ್ಕೆ ಮಾಡಲಾಗಿದೆ.

ರಾಜ್ಯಮಟ್ಟದ ಡಾ.ರಾಜಕುಮಾರ ಹೆಸರಿನಲ್ಲಿ ನೀಡಲಾಗುವ ‘ಕಲಾಭೂಷಣ ಪ್ರಶಸ್ತಿ’ಗೆ ರವೀಂದ್ರ ಸೋರಗಾಂವಿ, ಜೀವನಮಾನ ಸಾಧನೆ ಪ್ರಶಸ್ತಿಗಳನ್ನು ಡಾ.ಬಸವರಾಜ ಸಾದರ, ಯೋಗೀಶ ಕರಗುದರಿ, ಡಾ.ಶ್ರೀನಿವಾಸ ಕುಲಕರ್ಣಿ, ಚಂದ್ರಗೌಡ ಪಾಟೀಲ, ಎಂ.ಬಿ. ಝಿರಲಿ, ಸಿ.ಎನ್. ನಾಯ್ಕರ ಅವರಿಗೆ ಘೋಷಿಸಲಾಗಿದೆ. ಯುವ ಸಾಧಕ ಪ್ರಶಸ್ತಿಗೆ ಮೀಹಿರ ಪೋತದಾರ ಹಾಗೂ ಸರ್ವೇಶ ಪೋತದಾರ ಭಾಜನವಾಗಿದ್ದಾರೆ.

ADVERTISEMENT

ವಿವಿಧ ಕ್ಷೇತ್ರಗಳ ಸಾಧಕರಾದ ಮಹಾವೀರ ನಿಲಜಗಿ, ಜಯಶ್ರೀ ನಿರಾಕಾರಿ, ಗಣಪತಿ ಉಪ್ಪಾರ, ಡಾ.ವಿಶ್ವನಾಥ ಉಪ್ಪಲದಿನ್ನಿ, ಶೈಲಜಾ ಕುಲಕರ್ಣಿ, ಪೂಜಾ ತಳವಾರ, ಚಂದ್ರಶೇಖರ ಹಿರೇಮಠ, ಸುಧೀರ ಘಿವಾರಿ, ಸುಹಾಸ ಕುಲಕರ್ಣಿ, ಅಜಯ ಸುನಾಳಕರ ‘ಸೇವಾ ರತ್ನ’ ಪ್ರಶಸ್ತಿ ಪ್ರಕಟಿಸಲಾಗಿದೆ. ವಾರ್ಷಿಕೋತ್ಸವ ಅಂಗವಾಗಿ ಜುಲೈ 7ರಂದು ನಡೆಯುವ ‘ಗಡಿನಾಡು ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಶಶಿಧರ ಘಿವಾರಿ ಹಾಗೂ ಕಾರ್ಯಾಧ್ಯಕ್ಷ ರುದ್ರಣ್ಣ ಚಂದರಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.