ADVERTISEMENT

ಬೆಳಗಾವಿ: ನೇಣು ಬಿಗಿದುಕೊಂಡು ಅಕ್ಕ, ತಮ್ಮ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 8:53 IST
Last Updated 5 ಸೆಪ್ಟೆಂಬರ್ 2020, 8:53 IST

ಬೆಳಗಾವಿ: ಇಲ್ಲಿನ ಶಹಾಪುರದ ಆಚಾರಿ ಗಲ್ಲಿಯಲ್ಲಿ ಅಕ್ಕ ಹಾಗೂ ತಮ್ಮ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಪಂಕಜಾ ನಾಯಿಕ (70) ಹಾಗೂ ಯದುಕುಲೇಶ ನಾಯಿಕ (61) ಎಂದು ಗುರುತಿಸಲಾಗಿದೆ.

‘ಮನೆಯಲ್ಲಿ ಅವರಿಬ್ಬರೇ ಇರುತ್ತಿದ್ದರು. ಘಟನೆ ಯಾವಾಗ ನಡೆದಿದೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಮನೆಯಿಂದ ದುರ್ವಾಸನೆ ಬರುತ್ತಿದ್ದಿದ್ದರಿಂದ ಅಕ್ಕಪಕ್ಕದ ಮನೆಯವರು ಗುರುವಾರ ಮಾಹಿತಿ ನೀಡಿದ್ದರು. ಬಂದು ಪರಿಶೀಲಿಸಿದಾಗ ಮೃತದೇಹಗಳು ಪತ್ತೆಯಾದವು’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.