ADVERTISEMENT

ಸ್ಮಾರ್ಟ್ ಕ್ಲಾಸ್ ರೂಂ ಅಭಿವೃದ್ಧಿ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 13:48 IST
Last Updated 4 ಅಕ್ಟೋಬರ್ 2021, 13:48 IST
ಬೆಳಗಾವಿ ತಾಲ್ಲೂಕಿನ ಉಚಗಾಂವದ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್‌ ತರಗತಿ ಕೊಠಡಿಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಉದ್ಘಾಟಿಸಿದರು
ಬೆಳಗಾವಿ ತಾಲ್ಲೂಕಿನ ಉಚಗಾಂವದ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್‌ ತರಗತಿ ಕೊಠಡಿಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಉದ್ಘಾಟಿಸಿದರು   

ಬೆಳಗಾವಿ: ‘ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪ್ರತಿ ಶಾಲೆಯಲ್ಲೂ ಸ್ಮಾರ್ಟ್ ಕ್ಲಾಸ್ ರೂಂ ಅಭಿವೃದ್ಧಿಪಡಿಸುವ ಯೋಜನೆ ಇದೆ. ಮೊದಲ ಹಂತದಲ್ಲಿ 20 ಶಾಲೆಗಳಲ್ಲಿ ಸಿದ್ಧವಾಗಿವೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.

ತಾಲ್ಲೂಕಿನ ಉಚಗಾಂವ ಹಾಗೂ ಬಿಜಗರಣಿ ಗ್ರಾಮಗಳ ಹಿರಿಯ ಪ್ರಾಥಮಿಕ ಶಾಲೆಗಳ ಸ್ಮಾರ್ಟ್ ಕ್ಲಾಸ್ ರೂಂಗಳನ್ನು ಸೋಮವಾರ ಉದ್ಘಾಟಸಿ ಅವರು ಮಾತನಾಡಿದರು.

‘ಶಾಸಕಿಯಾದ ನಂತರ ದೆಹಲಿಗೆ ಹೋದ ಸಂದರ್ಭದಲ್ಲಿ ಅಲ್ಲಿನ ಸರ್ಕಾರಿ ಶಾಲೆಗಳನ್ನು ಗಮನಿಸಿದ್ದೆ. ನಮ್ಮ ಕ್ಷೇತ್ರದಲ್ಲೂ ಅದೇ ಮಾದರಿಯ ತರಗತಿ ಕೊಠಡಿಗಳನ್ನು ಮಾಡಬೇಕು ಎನ್ನುವ ಕನಸು ಹೊತ್ತು ಬಂದಿದ್ದೆ. ಅದರಂತೆ ಸಿಎಸ್ಆರ್ ನಿಧಿಯಲ್ಲಿ ಕ್ರಮ ವಹಿಸುತ್ತಿದ್ದೇನೆ’ ಎಂದರು.

ADVERTISEMENT

‘ಶಿಕ್ಷಣವಿದ್ದರಷ್ಟೆ ಜನರ ಮತ್ತು ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಜೊತೆಗೆ ಗುಣಮಟ್ಟದ ಶಿಕ್ಷಣವೂ ಅಗತ್ಯವಾಗಿದೆ. ನಾವು ಕಲಿಯುವಾಗ ಈ ಅವಕಾಶ ಸಿಗಲಿಲ್ಲ. ಆದರೆ, ಕ್ಷೇತ್ರದ ಮಕ್ಕಳು ಗುಣಮಟ್ಟದ ಕಲಿಕೆಯಿಂದ ವಂಚಿತ ಆಗಬಾರದು ಎನ್ನುವುದು ನನ್ನ ಉದ್ದೇಶವಾಗಿದೆ’ ಎಂದು ಹೇಳಿದರು.

‘ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸ್ಮಾರ್ಟ್ ಕ್ಲಾಸ್ ರೂಂಗಳನ್ನು ಮಾಡಲಾಗಿದೆ’ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಬಿಇಒ ಆರ್.ಪಿ.ಜುಟ್ಟನವರ, ಮುಖಂಡರಾದ ಚನ್ನರಾಜ ಹಟ್ಟಿಹೊಳಿ, ಮನೋಹರ ಬೆಳಗಾಂವ್ಕರ, ಯಲ್ಲಪ್ಪ ಬೆಳಗಾಂವ್ಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.