ADVERTISEMENT

ಮೂಡಲಗಿ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಚಾಲನೆ 

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 6:22 IST
Last Updated 24 ಸೆಪ್ಟೆಂಬರ್ 2025, 6:22 IST
ಮೂಡಲಗಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ  ಸೋಮವಾರ ತಹಶೀಲ್ದಾರ್‌ ಶ್ರೀಶೈಲ್‌ ಗುಡಮೆ ಅವರು ಸಮೀಕ್ಷೆ ತಂಡದೊಂದಿಗೆ ಪುರಸಭೆ ಮಾಜಿ ಉಪಾಧ್ಯಕ್ಷ ರವಿ ಪಿ. ಸೋನವಾಲಕರ ಅವರ ಮನೆಗೆ ಭೇಟ್ಟಿ ನೀಡಿ ಸಮೀಕ್ಷೆ ಮಾಹಿತಿಗಳನ್ನು ಪಡೆಯುವ ಮೂಲಕ ಚಾಲನೆ ನೀಡಿದರು. 

ಮೂಡಲಗಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಮೂಡಲಗಿಯಲ್ಲಿ ಸೋಮವಾರ ತಹಶೀಲ್ದಾರ್‌ ಶ್ರೀಶೈಲ್‌ ಗುಡಮೆ ಅವರು ಸಮೀಕ್ಷೆ ತಂಡದೊಂದಿಗೆ ಪುರಸಭೆ ಮಾಜಿ ಉಪಾಧ್ಯಕ್ಷ ರವಿ ಪಿ. ಸೋನವಾಲಕರ ಅವರ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಹಿತಿಗಳನ್ನು ಪಡೆಯುವ ಮೂಲಕ ಚಾಲನೆ ನೀಡಿದರು.

ತಹಶೀಲ್ದಾರ್‌ ಗುಡಮೆ ಮಾತನಾಡಿ ‘ಸಮೀಕ್ಷೆಗೆ ಬರುವ ಸಿಬ್ಬಂದಿಗೆ ಸಾರ್ವಜನಿಕರು ಸರಿಯಾದ ಮಾಹಿತಿಗಳನ್ನು ನೀಡುವ ಮೂಲಕ ಸರ್ಕಾರದ ಯೋಜನೆಯ ಯಶಸ್ಸಿಗೆ ಸಹಕರಿಸಬೇಕು. ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಸಹಾಯವಾಗುವುದು’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ, ಶಿಕ್ಷಣ ಸಂಯೋಜಕರು, ಸಮೀಕ್ಷೆ ಸಿಬ್ಬಂದಿ, ಮೇಲ್ವಿಚಾರಕರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.