ADVERTISEMENT

ಗ್ರಾಹಕರ ವಿಶ್ವಾಸ ಗಳಿಸಿದರೆ ಬ್ಯಾಂಕಿನ ಅಭಿವೃದ್ಧಿ: ಭಟ್ಟಾಕಲಂಕ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 5:16 IST
Last Updated 16 ಜುಲೈ 2024, 5:16 IST
ಬೆಳಗಾವಿಯ ಮಹಾವೀರ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾವೀರ ಕೋ-ಆಪರೇಟಿವ್‌ ಬ್ಯಾಂಕಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಟ್ಟಾರಕ ಭಟ್ಟಾಕಲಂಕ ಸ್ವಾಮೀಜಿ ದೀಪ ಬೆಳಗಿಸಿದರು
ಬೆಳಗಾವಿಯ ಮಹಾವೀರ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾವೀರ ಕೋ-ಆಪರೇಟಿವ್‌ ಬ್ಯಾಂಕಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಟ್ಟಾರಕ ಭಟ್ಟಾಕಲಂಕ ಸ್ವಾಮೀಜಿ ದೀಪ ಬೆಳಗಿಸಿದರು   

ಬೆಳಗಾವಿ: ‘ಸಹಕಾರ ಕ್ಷೇತ್ರದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿದರೆ ಮಾತ್ರ ಒಂದು ಸಹಕಾರ ಸಂಸ್ಥೆ ಪ್ರಗತಿಯತ್ತ ಹೆಜ್ಜೆಹಾಕಲು ಸಾಧ್ಯ’ ಎಂದು ಸೋಂದಾ ಮಠದ ಭಟ್ಟಾರಕ ಭಟ್ಟಾಕಲಂಕ ಸ್ವಾಮೀಜಿ ಹೇಳಿದರು.

ಇಲ್ಲಿನ ಮಹಾವೀರ ಭವನದಲ್ಲಿ ಆಯೋಜಿಸಿದ್ದ ಮಹಾವೀರ ಕೋ-ಆಪರೇಟಿವ್‌ ಬ್ಯಾಂಕಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿದ ಹಿನ್ನೆಲೆಯಲ್ಲಿ ಈ ಬ್ಯಾಂಕ್‌ ಇಂದು ಸಂಭ್ರಮದಿಂದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ’ ಎಂದರು.

ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಡಿ.ಜೆ.ಗುಂಡೆ, ‘ಪ್ರಸ್ತುತ ಕಾಲಘಟ್ಟದಲ್ಲಿ 50 ವರ್ಷಗಳವರೆಗೆ ಒಂದು ಬ್ಯಾಂಕ್‌ ನಡೆಸುವುದು ಸುಲಭದ ಮಾತಲ್ಲ. ಬ್ಯಾಂಕಿನ ಆಡಳಿತ ಮಂಡಳಿಯೊಂದಿಗೆ ಸಿಬ್ಬಂದಿಯೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರಿಂದ ಇದು ಯಶಸ್ಸು ಕಾಣಲು ಸಾಧ್ಯವಾಗಿದೆ’ ಎಂದರು.


ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಸಹಕಾರ ಇಲಾಖೆ ಜಂಟಿನಿರ್ದೇಶಕ ಸುರೇಶಗೌಡ ಮಾತನಾಡಿದರು.

ADVERTISEMENT

ಬ್ಯಾಂಕಿನ ಅಧ್ಯಕ್ಷ ಪಿ.ಎಂ.ಲೆಂಗಡೆ, ವಿನೋದಾ ಗುಂಡೆ, ಅಜಿತ ಪಾಟೀಲ, ತುಷಾರ ಪಾಟೀಲ, ಅನಿಲ ಪಾಟೀಲ, ಹೀರಾಚಂದ ಕಲಮನಿ, ಶ್ರೀಪಾಲ ಖೇಮಲಾಪುರೆ, ಎಸ್.ಬಿ.ನಿಲಜಗಿ, ಯು.ಟಿ.ಕೊಲ್ಲಾಪುರೆ, ಬಿ.ಬಿ.ಪೂಜಾರ  ಇತರರಿದ್ದರು. ಭೂಷಣ ಮಿರ್ಜಿ ಸ್ವಾಗತಿಸಿದರು. ಶೀಲಾ ಮಿರ್ಜಿ ವಂದಿಸಿದರು. ಸೂರಜ ಮತ್ತು ಅಶ್ವಿನಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.