
ಲಕ್ಷ್ಮೇಶ್ವರ: ‘10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವ ಭರವಸೆ ನೀಡಿ, ಕೇಂದ್ರದತ್ತ ಕೈ ತೋರಿಸುವ ಬದಲು ರಾಜ್ಯ ಸರ್ಕಾರವೇ ಆವರ್ತ ನಿಧಿಯಿಂದ ₹ 300 ಕೋಟಿ ವ್ಯಯಿಸಿ ಮೆಕ್ಕೆಜೋಳ ಖರೀದಿಸಲಿ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಇಲ್ಲಿನ ಶಿಗ್ಲಿ ಕ್ರಾಸ್‍ನಲ್ಲಿ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ತಾಲ್ಲೂಕಿನ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನೀತಿಯಡಿ ಕೆಲಸ ಮಾಡಿದರೆ ರೈತರಿಗೆ ಅನುಕೂಲ. ಸಂಘರ್ಷ ಮಾಡಿದರೆ ನಷ್ಟವಾಗುತ್ತದೆ. ರೈತರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ’ ಎಂದರು.
‘ರೈತರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು. ₹2,400 ದರ ನಿರೀಕ್ಷೆಯಲ್ಲಿ ರೈತರು ಮೆಕ್ಕೆಜೋಳ ತರುತ್ತಿದ್ದಾರೆ, ಆದರೆ ದರ ₹1,600ಕ್ಕೆ ಕುಸಿದಿದೆ. ಈಗ ಸರ್ಕಾರವೇ ಖರೀದಿಗೆ ಮುಂದಾದರೆ, ದರವೂ ಏರಿಕೆ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.