ADVERTISEMENT

‘ಅಟಲ್ ಸುರಂಗ’ಕ್ಕೆ ಜಿಐಟಿ ವಿದ್ಯಾರ್ಥಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 8:07 IST
Last Updated 21 ಜನವರಿ 2022, 8:07 IST
ಬೆಳಗಾವಿಯ ಕೆಎಲ್‌ಎಸ್– ಜಿಐಟಿಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ‘ಯುವಕ್ ಯೋಜನೆ’ಯಲ್ಲಿ ಹಿಮಾಚಲಪ್ರದೇಶದ ಅಟಲ್‌ ಸುರಂಗಕ್ಕೆ ಈಚೆಗೆ ಭೇಟಿ ನೀಡಿದ್ದರು
ಬೆಳಗಾವಿಯ ಕೆಎಲ್‌ಎಸ್– ಜಿಐಟಿಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ‘ಯುವಕ್ ಯೋಜನೆ’ಯಲ್ಲಿ ಹಿಮಾಚಲಪ್ರದೇಶದ ಅಟಲ್‌ ಸುರಂಗಕ್ಕೆ ಈಚೆಗೆ ಭೇಟಿ ನೀಡಿದ್ದರು   

ಬೆಳಗಾವಿ: ಇಲ್ಲಿನ ಕೆಎಲ್‌ಎಸ್– ಜಿಐಟಿಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ‘ಯುವಕ್ ಯೋಜನೆ’ಯಲ್ಲಿ ಹಿಮಾಚಲಪ್ರದೇಶದ ‘ಅಟಲ್‌ ಸುರಂಗ’ಕ್ಕೆ ಈಚೆಗೆ ಭೇಟಿ ನೀಡಿದ್ದರು.

ಸಿವಿಲ್ ಎಂಜಿನಿಯರಿಂಗ್ ವಿಭಾಗದ 10 ಮಂದಿ ಅಂತಿಮ ವರ್ಷದ ವಿದ್ಯಾರ್ಥಿಗಳು, ತಂಡದ ನಾಯಕ ಡಾ.ವಿಕಾಸ್ ಜಿಂಗಿನ್ ಮತ್ತು ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ.ವಿನಾಯಕ ಮುತಾಲಿಕ ದೇಸಾಯಿ ಅವರೊಂದಿಗೆ ಎಐಸಿಟಿಇ ಯುವಕ್ ಯೋಜನೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಈ ಭೇಟಿ ಕೈಗೊಳ್ಳಲು ಎಐಸಿಟಿಇಯಿಂದ ₹ 2 ಲಕ್ಷ ಅನುದಾನ ಮಂಜೂರಾಗಿತ್ತು ಎಂದು ಕಾಲೇಜು ತಿಳಿಸಿದೆ.

ಅಟಲ್ ಸುರಂಗವು ಸಿವಿಲ್ ಎಂಜಿನಿಯರಿಂಗ್‌ ಕೌಶಲದ ಅದ್ಭುತವಾಗಿದೆ. ಇದನ್ನು ಲೇಹ್- ಮನಾಲಿನಲ್ಲಿ ರೋಹ್ಟಾಂಗ್ ಪಾಸ್ ಅಡಿ ನಿರ್ಮಿಸಲಾಗಿದೆ. ಈ ಸುರಂಗ ಹೆದ್ದಾರಿಯನ್ನು ಕಣಿವೆಗಳಿಗೆ ಎಲ್ಲ ರೀತಿಯ ಹವಾಮಾನ ಮಾರ್ಗವಾಗಿ ನಿರ್ಮಿಸಲಾಗಿದೆ. ಮನಾಲಿಯ ನಡುವಿನ ಒಟ್ಟಾರೆ ಅಂತರವನ್ನು ಕಡಿಮೆ ಮಾಡುತ್ತದೆ. ಇದನ್ನು ವೀಕ್ಷಿಸುವ ಅವಕಾಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಯತ್ನಿಸುವ ಕಾರ್ಯಕ್ರಮ ನಡೆದಿದೆ.

ADVERTISEMENT

ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಡಾ.ಜಯಂತ್ ಕಿತ್ತೂರ ಮತ್ತು ಕೆಎಲ್‌ಎಸ್ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.