ADVERTISEMENT

ಪ್ರತಿ ಟನ್ ಕಬ್ಬಿಗೆ ₹3 ಸಾವಿರ: ವಿಠ್ಠಲ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 3:11 IST
Last Updated 24 ಅಕ್ಟೋಬರ್ 2025, 3:11 IST
ಖಾನಾಪುರ ಸಮೀಪದ ಲೈಲಾ ಶುಗರ್ಸ್ ಆವರಣದಲ್ಲಿ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಶಾಸಕ ಹಲಗೇಕರ ಹಾಗೂ ಇತರರು ಚಾಲನೆ ನೀಡಿದರು
ಖಾನಾಪುರ ಸಮೀಪದ ಲೈಲಾ ಶುಗರ್ಸ್ ಆವರಣದಲ್ಲಿ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಶಾಸಕ ಹಲಗೇಕರ ಹಾಗೂ ಇತರರು ಚಾಲನೆ ನೀಡಿದರು   

ಖಾನಾಪುರ: ಸಮೀಪದ ಲೈಲಾ ಶುಗರ್ಸ್ ಆವರಣದಲ್ಲಿ ಬುಧವಾರ ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮಿಗೆ ಕಾರ್ಖಾನೆಯ ಅಧ್ಯಕ್ಷ, ಶಾಸಕ ವಿಠ್ಠಲ ಹಲಗೇಕರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಮೊದಲ ಕಂತಿನ ರೂಪದಲ್ಲಿ ಪ್ರತಿ ಟನ್ ಕಬ್ಬಿಗೆ ₹3 ಸಾವಿರ ಮತ್ತು ಎರಡನೇ ಕಂತಿನಲ್ಲಿ ಸರ್ಕಾರದ ಎಫ್.ಆರ್.ಪಿ ನಿಗದಿಪಡಿಸಿದ ದರ ನೀಡಲಾಗುವುದು’ ಎಂದು ಘೋಷಿಸಿದರು.

‘ಈ ಬಾರಿ ಕಬ್ಬು ಕಟಾವಿಗಾಗಿ ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳಿಂದ 400ಕ್ಕೂ ಹೆಚ್ಚು ತಂಡಗಳನ್ನು ಕರೆಸಲಾಗುತ್ತದೆ. ಎಲ್ಲ ರೈತರ ಹೊಲಗಳಿಗೆ ಈ ತಂಡಗಳು ತೆರಳಿ ಕಬ್ಬು ಕಟಾವು ಮಾಡಲಿವೆ. ರೈತರು ಯಾವುದಕ್ಕೂ ಅವಸರಪಡಬಾರದು’ ಎಂದರು.

ADVERTISEMENT

ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ, ತೋಪಿನಕಟ್ಟಿ ಗ್ರುಪ್ ನ ಮುಖಂಡರಾದ ಚಾಂಗಪ್ಪ ನಿಲಜಕರ, ತುಕಾರಾಮ ಹುಂದ್ರೆ, ವಿಠ್ಠಲ ಕರಂಬಳಕರ, ಬಿಜೆಪಿ ಮುಖಂಡ ಮಲ್ಲಪ್ಪ ಮಾರಿಹಾಳ, ರೈತ ಮುಖಂಡ ಮಲ್ಲಪ್ಪ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.