ADVERTISEMENT

‘ಸ್ವಾಮಿತ್ವ’ದಿಂದ ಕೈಬಿಡಲು ಆಗ್ರಹಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 14:03 IST
Last Updated 5 ಅಕ್ಟೋಬರ್ 2020, 14:03 IST
ಕೇಂದ್ರ ಸರ್ಕಾರದ ‘ಸ್ವಾಮಿತ್ವ’ ಯೋಜನೆಯಿಂದ ತಮ್ಮನ್ನು ಕೈಬಿಡುವಂತೆ ಆಗ್ರಹಿಸಿ ಅಥಣಿಯಲ್ಲಿ ಪರವಾನಗಿ ಭೂ ಮಾಪಕರ ಸಂಘದವರು ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಪುನೀತ ಪಾಸೋಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು
ಕೇಂದ್ರ ಸರ್ಕಾರದ ‘ಸ್ವಾಮಿತ್ವ’ ಯೋಜನೆಯಿಂದ ತಮ್ಮನ್ನು ಕೈಬಿಡುವಂತೆ ಆಗ್ರಹಿಸಿ ಅಥಣಿಯಲ್ಲಿ ಪರವಾನಗಿ ಭೂ ಮಾಪಕರ ಸಂಘದವರು ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಪುನೀತ ಪಾಸೋಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು   

ಅಥಣಿ: ‘ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯಡಿ ಪರವಾನಗಿ ಭೂಫಕರನ್ನು ಕೈಬಿಡಬೇಕು’ ಎಂದು ರಾಜ್ಯ ಪರವಾನಗಿ ಭೂ ಮಾಪಕರ ಸಂಘದ ಅಥಣಿ ಮತ್ತು ಕಾಗವಾಡ ತಾಲ್ಲೂಕು ಶಾಖೆಯ ಪದಾಧಿಕಾರಿಗಳು ಸೋಮವಾರ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಪುನೀತ ಪಾಸೋಡಿ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಪಿ. ಮಹೇಶ, ‘ಯೋಜನೆಯಡಿ ಪರವಾನಗಿ ಭೂಮಾಪಕರನ್ನು ನಿಯೋಜಿಸಿಕೊಳ್ಳಲಾಗಿದೆ. ಯಾವುದೇ ರೀತಿಯ ತರಬೇತಿ ನೀಡಿಲ್ಲ. ಸೇವಾ ಭದ್ರತೆ ಬಗ್ಗೆ ರಾಜ್ಯ ಘಟಕದ ಪದಾಧಿಕಾರಿಗಳೊಂದಿಗೆ ಇಲಾಖೆಯ ಆಯುಕ್ತರು ಚರ್ಚಿಸದೆ ನೇರವಾಗಿ ನಿಯೋಜಿಸಿದ್ದಾರೆ. ಇದು ಖಂಡನೀಯ’ ಎಂದರು.

‘15ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಮಗೆ ಸೇವಾ ಭದ್ರತೆ ಇಲ್ಲ. ಪೋಡಿ ಮುಕ್ತ ಅಭಿಯಾನ, ಕೆರೆ ಅಳತೆ ಸೇರಿದಂತೆ ಹಲವಾರು ಭೂ ಮಾಪನ ಕೆಲಸಗಳಿಗೆ ನಮ್ಮನ್ನು ಬಳಸಿಕೊಳ್ಳಲಾಗಿದೆ. ಆದರೆ, ಸರಿಯಾದ ವೇತನ ಸಿಗುತ್ತಿಲ್ಲ. ಪೋಡಿ ಮುಕ್ತ ಅಭಿಯಾನದಲ್ಲಿ ಮಾಡಿದ ಕೆಲಸಕ್ಕೆ 4 ವರ್ಷಗಳಾದರೂ ಸಂಭಾವನೆ ಬಂದಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ನಮ್ಮನ್ನು ಕಾಯಂಗೊಳಿಸಿ, ಸರಿಯಾದ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬಳಿಕ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರಿಗೂ ಮನವಿ ಸಲ್ಲಿಸಿದರು.

ಪದಾಧಿಕಾರಿಗಳಾದ ಪಿ.ಆರ್. ಷಣ್ಮುಖಪ್ಪ, ಎಸ್.ಕೆ. ಗಂಗಾಧರ, ಆರ್. ರವಿಕುಮಾರ, ಕೆ.ಎಂ. ಚೇತನ, ಶಕ್ತಿಕುಮಾರ ಹಂಚಿನಮನಿ, ಕೆ.ಎಸ್. ಅನಿಲ, ಟಿ.ಎಸ್. ಯೋಗಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.